ನವದೆಹಲಿ: ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡ ಕೆಲವೇ ತಿಂಗಳುಗಳಲ್ಲಿ ಶಶಾಂಕ್ ಮನೋಹರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷ ಸ್ಥಾನದಲಿರುವವರು ಇತರ ಸದಸ್ಯ ಮಂಡಳಿಗಳ ಯಾವುದೇ ಸ್ಥಾನವನ್ನು ಹೊಂದುವಂತಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಸ್ತಾಪಿಸಿತ್ತು.
ಐಸಿಸಿ ಇತ್ತೀಚೆಗೆ ದುಬೈನಲ್ಲಿ ನಡೆಸಿ ಸಭೆಯಲ್ಲಿ ಐಸಿಸಿ ಅಧ್ಯಕ್ಷ ಸ್ವತಂತ್ರವಾಗಿರಲಿದ್ದು, ಮೇ ತಿಂಗಳಿನಲ್ಲಿ ನಡೆಯಲಿರುವ ಗುಪ್ತ ಮತದಾನದ ಬಳಿಕ ಆಯ್ಕೆ ಮಾಡಲಾಗುವುದು ಎಂದು ನಿರ್ಧರಿಸಿತ್ತು.
ಜಗ್ಮೋಹನ್ ದಾಲ್ಮಿಯಾ ಅವರ ಬಳಿಕ ಶಶಾಂಕ್ ಮನೋಹರ್ ಅವರು ಅಕ್ಟೋಬರ್ 2015ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಚುನಾವಣಾ ಪ್ರಕ್ರಿಯೆಯು ಐಸಿಸಿ ಸ್ವತಂತ್ರ ಆಡಿಟ್ ಕಮಿಟಿ ಅಧ್ಯಕ್ಷರ ಮೇಲ್ವಿಚಾರಣೆಯಲ್ಲಿ ನಡೆಯಲಿದ್ದು, ಪ್ರಸ್ತುತ ಹಾಗೂ ಹಿಂದಿನ ಐಸಿಸಿ ನಿರ್ದೇಶಕರು ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಪಡೆಯಲಿದ್ದಾರೆ. ಆದಾಗ್ಯೂ, ಓರ್ವ ಪ್ರತ್ಯೇಕ ಐಸಿಸಿ ನಿರ್ದೇಶಕ ಅಭ್ಯರ್ಥಿಗಳನ್ನು ನೇಮಿಸಲಿದ್ದು, ಓರ್ವ ಅಭ್ಯರ್ಥಿಯನ್ನು ಮಾತ್ರ ನಾಮನಿರ್ದೆಶನ ಮಾಡುವ ಅವಕಾಶ ಪಡೆಯಲಿದ್ದಾರೆ.
ಈ ನಿಯಮದಂತೆ ಕಳೆದ ನವೆಂಬರ್ 2015ರಲ್ಲಿ ಐಸಿಸಿ ಅಧ್ಯಕ್ಷ ಸ್ಥಾನ ಪಡೆದುಕೊಂಡಿದ್ದ ಶಶಾಂಕ್ ಮನೋಹರ್ ಬಿಸಿಸಿಐ ಅಧ್ಯಕ್ಷ ಸ್ಥಾನ ಹೊಂದಿದಲ್ಲಿ ಐಸಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಕಳೆದುಕೊಳ್ಳಲಿದ್ದಾರೆ.
ಶಶಾಂಕ್ ಮನೋಹರ್ ಅವರು ಐಸಿಸಿ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.