ಪೋರಬಂದರ್: ಭಾರೀ ಪ್ರಮಾಣದ ಮಾದಕ ದ್ರವ್ಯಗಳನ್ನು ಹೊತ್ತು ಸಾಗುತ್ತಿದ್ದ ಶಂಕಿತ ಪಾಕಿಸ್ಥಾನದ ದೋಣಿಯನ್ನು ಗುಜರಾತಿನ ಪೋರಬಂದರಿನಲ್ಲಿ ಭಾರತೀಯ ನೌಕಾ ಮತ್ತು ಕರಾವಳಿ ತಟ ರಕ್ಷಣಾ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಸುಮಾರು ರೂ.600 ಕೋಟಿ ಮೌಲ್ಯದ 200ಕೆ.ಜಿ ಹೆರಾಯಿನ್ನನ್ನು ಈ ದೋಣಿಯಿಂದ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿದ್ದ 8 ಪಾಕಿಸ್ಥಾನದ ಪ್ರಜೆಗಳನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಗೊಳಪಡಿಸಲಾಗಿದೆ.
ಈ ಮಾದಕದ್ರವ್ಯವನ್ನು ಯಾರಿಗೆ ತಲುಪಿಸಲಾಗುತ್ತಿತ್ತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪಾಕ್ ದೋಣಿಗೆ ಸಮೀಪದಲ್ಲಿದ್ದ ಇತರ ಎರಡು ಭಾರತೀಯ ದೋಣಿಗಳನ್ನೂ ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಎರಡು ತಿಂಗಳ ಹಿಂದೆಯಷ್ಟೇ ಸ್ಫೋಟಕಗಳನ್ನು ಹೊತ್ತು ಬರುತ್ತಿದ್ದ ಪಾಕ್ ಮೀನುಗಾರಿಕಾ ದೋಣಿ ಗುಜರಾತ್ ಕರಾವಳಿಯಲ್ಲಿ ಸ್ಫೋಟಗೊಂಡಿದ್ದು, ಇದೀಗ ಮಾದಕದ್ರವ್ಯ ಹೊತ್ತ ಪಾಕ್ ದೋಣಿ ನೌಕಾ ಸಿಬ್ಬಂದಿಗಳ ಬಲೆಗೆ ಬಿದ್ದಿದೆ. ಒಟ್ಟಿನಲ್ಲಿ ನೇರವಾಗಿ ಯುದ್ಧ ಮಾಡಲಾಗದ ಪಾಕಿಸ್ಥಾನ ಮಾದಕದ್ರವ್ಯ, ಭಯೋತ್ಪಾದಕರನ್ನು ರವಾನಿಸುವ ಮೂಲಕ ಭಾರತದ ಮೇಲೆ ಪರೋಕ್ಷ ಯುದ್ಧವನ್ನು ಸಾರುತ್ತಿದೆ. ಅದರ ಈ ಪ್ರಯತ್ನವನ್ನು ಭಾರತ ವಿಫಲಗೊಳಿಸಲು ಸದಾ ಸನ್ನದ್ಧವಾಗಿರಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.