ಬೆಳ್ತಂಗಡಿ : ದಲಿತರು ಶೋಷಣೆ, ದಬ್ಬಾಳಿಕೆಗಳಿಂದ ಮುಕ್ತರಾಗ ಬೇಕಾದರೆ ಶಿಕ್ಷಣ ಪಡೆಯಬೇಕು ಅನಾದಿ ಕಾಲದಿಂದಲೂ ಧರ್ಮಶಾಸ್ತ್ರಗಳ ಭಯ ಮೂಡಿಸಿ ದಲಿತರನ್ನು ಊಳಿಗಮಾನ್ಯ ವ್ಯವಸ್ಥೆಯಲ್ಲಿ ಮುಂದುವರಿಸುತ್ತಿರುವುದು ದಲಿತೇತರ ಸಮಾಜಕ್ಕೆ ಅವಮಾನ ಎಂದು ನಾಗರಿಕ ಸೇವಾಟ್ರಸ್ಟ್ ಅಧ್ಯಕ್ಷ ಶ್ರೀ ಸೋಮನಾಥ್ ನಾಯಕ್ ಹೇಳೀದರು.
ಅವರು ಟ್ರಸ್ಟ್ ಕಚೇರಿಯಲ್ಲಿ ನಡೆದ ಡಾ. ಬಿ. ಆರ್ಅಂಬೇಡ್ಕರರ 125ನೇ ಜನ್ಮದಿನಾಚರಣೆ ಉದ್ದೇಶಿಸಿ ಮಾತನಾಡಿದರು. ಇತ್ತೀಚಿನ ಸರ್ವೇ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ವರ್ಗದ ಸುಮಾರು ಶೇಕಡಾ 72ಮಕ್ಕಳು ಶಾಲೆ ಬಿಡುತ್ತಾರೆ. ದಲಿತರ ಶಿಕ್ಷಣಕ್ಕೆ ಮತ್ತು ಆರ್ಥಿಕ ಅಭಿವೃದ್ಧಿಗೆ ದಲಿತ ಮತ್ತು ದಲಿತಪರ ಸಂಘಟನೆಗಳು ಒತ್ತುಕೊಡಬೇಕಾಗಿದೆ ಎಂದು ಟ್ರಸ್ಟ್ನ ಸ್ಥಾಪಕ ಟ್ರಸ್ಟಿ ರಂಜನ್ರಾವ್ ಯರ್ಡೂರ್ ಅಭಿಪ್ರಾಯಪಟ್ಟರು
ನಾಗರಿಕ ಸೇವಾ ಟ್ರಸ್ಟ್ ಪ್ರವರ್ತಿತ ದಲಿತ ಅಭಿವೃದ್ಧಿಯ ಸಹಸಂಚಾಲಕ ಹೆಚ್.ಬಿ ಮೋಹನ್ ಅಂಬೇಡ್ಕರ್ಒಂದು ವೇಳೆ ಈ ದೇಶದಲ್ಲಿ ಹುಟ್ಟದೆ ಇರುತ್ತಿದ್ದರೆ, ದಲಿತರು, ಹಿಂದುಳಿದ ವರ್ಗದವರು ಸಮಾನತೆ ಸ್ವಾತಂತ್ರ್ಯ, ಭ್ರಾತೃತ್ವದಲ್ಲಿ ಬದುಕಲು ಆಗುತ್ತಿರಲಿಲ್ಲ. ಅವರ ಪಾಂಡಿತ್ಯಪೂರ್ಣ ಸಂವಿಧಾನವು ದೇಶದ ಎಲ್ಲಾ ಜಾತಿ ವರ್ಗಗಳ ಏಳಿಗೆ ಬಯಸಿ ಬರೆದಿರುವುದಾಗಿದೆ. ನಾಗರಿಕ ಸೇವಾ ಟ್ರಸ್ಟ್ ದಲಿತಪರ ಚಿಂತನೆಗಳನ್ನು ಅಳವಡಿಸಿ ಅಸ್ಪ್ರಶ್ಯತೆ ನಿವಾರಣೆ ಮತ್ತುಅಭಿವೃಧ್ಧಿ ಕಾರ್ಯಕ್ರಮ ಹಮ್ಮಿಕೊಂಡು ಬಂದಿದೆ ಎಂದರು.
ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಎಚ್. ಸ್ವಾಗತಿಸಿದರು. ದಲಿತ ಅಭಿವೃದ್ಧಿ ಸಮಿತಿಯ ಸಂಚಾಲಕ ನಾರಾಯಣ ಕಿಲಂಗೋಡಿ ಪ್ರಸ್ತಾವಿಸಿದರು. ಸಹಸಂಚಾಲಕ ಸೋಮ ಕೆ.ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.