ನವದೆಹಲಿ: ಗಡಿಯಲ್ಲಿ ಪಾಕಿಸ್ಥಾನಿಯರು ನಡೆಸುತ್ತಿರುವ ಒಳನುಸುಳುವಿಕೆಯನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಹೈ ಟೆಕ್ ತಂತ್ರಜ್ಞಾನಗಳನ್ನು ಅಳವಡಿಸಲು ಭಾರತ ಮುಂದಾಗಿದೆ.
ಭಯೋತ್ಪಾದಕರು ಮತ್ತು ಕಳ್ಳಸಾಗಾಣೆದಾರರು ಭಾರತದೊಳಕ್ಕೆ ಒಳನುಸುಳದಂತೆ ತಡೆಯಲು 2900ಕಿ.ಮೀ ಪಶ್ಚಿಮ ಭಾಗದ ಗಡಿಯನ್ನು ’ಲಾಕ್’ ಮಾಡುವ ನಿಟ್ಟಿನಲ್ಲಿ 5 ಸುತ್ತಿನ ವ್ಯವಸ್ಥೆ ಅಳವಡಿಸುವ ಪ್ರಸ್ತಾವಣೆಗೆ ಕೇಂದ್ರ ಸಮ್ಮತಿಯನ್ನು ಸೂಚಿಸಿದೆ ಎಂದು ವರದಿಗಳು ತಿಳಿಸಿವೆ.
’ಕಾಂಪ್ರಹೆನ್ಸಿವ್ ಇಂಟಿಗ್ರೇಟೆಡ್ ಬಾರ್ಡರ್ ಮ್ಯಾನೇಜ್ಮೆಂಟ್ ಸಿಸ್ಟಮ್’ (ಸಿಐಬಿಎಂಎಸ್) ಎಂದು ಈ ಐದು ಸುತ್ತಿನ ವ್ಯವಸ್ಥೆಯನ್ನು ಕರೆಯಲಾಗಿದ್ದು, ಈ ವ್ಯವಸ್ಥೆ ಸಿಐಬಿಎಂಎಸ್ ತಂತ್ರಜ್ಞಾನದ ಮೂಲಕ ಗಡಿಯಲ್ಲಿ 24x7x365 ಸರ್ವಿಲೆನ್ಸ್ನ್ನು ನೀಡಲಿದೆ.
ಈ ಇಂಟಿಗ್ರೇಟೆಡ್ ವ್ಯವಸ್ಥೆ ಸಿಸಿಟಿವಿ ಕ್ಯಾಮೆರಾ, ಥರ್ಮಲ್ ಇಮೇಜ್, ನೈಟ್ ವಿಶನ್ ಡಿವೈಸ್ಸ್, ಸರ್ವಿಲೆನ್ಸ್ ರಾಡರ್, ಅಂಡರ್ಗ್ರೌಂಡ್ ಮಾನಿಟರಿಂಗ್ ಸೆನ್ಸಾರ್ ಮತ್ತು ಲೇಸರ್ ಬ್ಯಾರಿಯರ್ಸ್ ಮೂಲಕ ಗಡಿಯ ಇನ್ನೊಂದು ಸೈಡ್ನಲ್ಲಿನ ಎಲ್ಲಾ ಚಲನ ವಲನಗಳನ್ನು ಮಾನಿಟರ್ ಮಾಡಲಿದೆ.
ಈ ವ್ಯವಸ್ಥೆ ಜಾರಿಗೆ ಬಂದರೆ ಗಡಿಯಲ್ಲಿ ನಡೆಯುವ ಒಳನುಸುಳುವಿಕೆಗೆ ಸಂಪೂರ್ಣ ಬ್ರೇಕ್ ಬೀಳಲಿದೆ ಎಂದು ಹೇಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.