ಶಿರೂರು: ಒರ್ವ ಕಡುಬಡವನೂ ನೆಮ್ಮದಿಯಿಂದ ಬದುಕುವುದು ಆ ಗ್ರಾಮದ ಅಭಿವೃದ್ಧಿಯ ಸಂಕೇತವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯ ನಿರ್ಮಾಣವಾಗಬೇಕಾದರೆ ಇಂತಹ ಸಂಘಟನೆಗಳು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು. ಸರಕಾರದ ಯಾವುದೇ ಅನುದಾನ, ಸಹಕಾರ ಪಡೆಯದೇ ಜನಶಕ್ತಿ ಒಂದಾಗಿ ಸೇರಿ ಆಯೋಜಿಸಿದ ಈ ಉತ್ಸವ ಉತ್ತಮ ಸಮಾಜ ಕಟ್ಟುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶಿರೂರು ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯುವ ಶಿರೂರು ಉತ್ಸವ-2015 ಉದ್ಘಾಟಿಸಿ ಮಾತನಾಡಿದರು. ಕರಾವಳಿಗೆ ತನ್ನದೇ ಆದ ಸಂಸ್ಕೃತಿ, ವೈಶಿಷ್ಟ್ಯತೆ ಹಾಗೂ ಪರಂಪರೆ ಇದೆ. ಜಿಲ್ಲೆಯ ಶಿರಭಾಗದ ಶಿರೂರು ಗ್ರಾಮದ ಎಲ್ಲಾ ಧರ್ಮೀಯರು ಸೇರಿ ಆಚರಿಸುತ್ತಿರುವ ಈ ಉತ್ಸವದ ಸಂದೇಶ ಜನಮಾನಸದಲ್ಲಿ ಉಳಿಯಲಿ. ದೇಶದ ನಾನಾ ಭಾಗಗಳಲ್ಲಿ ಹಾಗೂ ವಿದೇಶದಲ್ಲಿ ಉದ್ಯೋಗದ ನಿಮಿತ್ತ ನೆಲೆಸಿರುವ ಈ ಊರಿನ ಸದಸ್ಯರನ್ನು ಒಂದೇ ಕಡೆ ಸೇರಿಸುವ ವೇದಿಕೆಯಾಗಲಿ. ನಿಮ್ಮ ಕಲ್ಪನೆ ಈಡೇರುವ ಕನಸಿಗೆ ಈ ಉತ್ಸವ ನಾಂದಿಯಾಗಲಿ ಎಂದು ಶುಭಹಾರೈಸಿದರು.
ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ.ಸುಕುಮಾರ ಶೆಟ್ಟಿ, ಹುಬ್ಬಳ್ಳಿ ಉದ್ಯಮಿ ಆರ್. ವಿ. ಶೆಟ್ಟಿ, ಜಿಪಂ ಸದಸ್ಯ ಕೆ. ಬಾಬು ಶೆಟ್ಟಿ, ಗಾ.ಪಂ ಅಧ್ಯಕ್ಷ ರಾಮ ಮೇಸ್ತ, ನಾಗಶ್ರೀ ಧತ್ತಿನಿಧಿ ಪ್ರತಿಷ್ಠಾನದ ಮಂಜುನಾಥ ಬಿಲ್ಲವ, ತೂದಳ್ಳಿ ರೆಸಾಲ್ಟ್ ಮಾಲೀಕ ಕೆ. ಪಿ. ಶೆಟ್ಟಿ, ಲೆಕ್ಕ ಪರಿಶೋಧಕ ಶ್ರೀನಿವಾಸ ಶೆಟ್ಟಿ ಹೊಸ್ಮನೆ, ಉದ್ಯಮಿಗಳಾದ ದಯಾನಂದ ಆರ್. ಶೆಟ್ಟಿ ಹೊಸ್ಮನೆ, ರಾಮಚಂದ್ರ ಬಿ. ಶಿರೂರ್ಕರ್, ಎಸ್ ಪ್ರಕಾಶ ಪ್ರಭು, ತಾಲೂಕು ರೈತಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಧ.ಗ್ರಾ.ಯೋಜನೆ ವಲಯ ಮೇಲ್ವಿಚಾರಕ ವಿಜಯಕಮಾರ್ ಉಪಸ್ಥಿತರಿದ್ದರು.
ಉತ್ಸವ ಸಮಿತಿ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ ಸ್ವಾಗತಿಸಿ, ಅರುಣ್ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.