ನವದೆಹಲಿ: ಆಸ್ತಿಯ ಒಟ್ಟು ವಿವರವನ್ನು ಬಹಿರಂಗಪಡಿಸುವಂತೆ ಮದ್ಯದ ದೊರೆ ವಿಜಯ್ ಮಲ್ಯ ಮತ್ತು ಅವರ ಸ್ಥಗಿತಗೊಂಡಿರುವ ಏರ್ಲೈನ್ಸ್ ಸಂಸ್ಥೆಗೆ ಗುರುವಾರ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ವಿಜಯ್ ಮಲ್ಯ ಅವರು ಒಟ್ಟು ಸಾಲದಲ್ಲಿ 4 ಸಾವಿರ ಕೋಟಿ ಸಾಲವನ್ನು ಮಾತ್ರ ಮರುಪಾವತಿ ಮಾಡುವ ಆಫರ್ನ್ನು ಬ್ಯಾಂಕುಗಳು ತಿರಸ್ಕರಿಸಿವೆ. ಅಲ್ಲದೇ ಸಾಲ ಮರುಪಾವತಿಯ ಬಗ್ಗೆ ತಮ್ಮ ಗಂಭೀರತೆಯನ್ನು ತೋರಿಸಲು ದೇಶದಲ್ಲೇ ಅವರು ನೆಲೆಸಲಿ ಎಂದು ಆಗ್ರಹಿಸಿವೆ.
ನ್ಯಾ.ಕುರಿಯನ್ ಜೋಸೆಫ್ ಮತ್ತು ರೋಹಿಂತನ್ ಎಫ್ ನಾರಿಮನ್ ಅವರನ್ನೊಳಗೊಂಡ ನ್ಯಾಯಪೀಠ ಎ.26ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಸೆಪ್ಟಂಬರ್ ಒಳಗಾಗಿ ಒಟ್ಟು ಸಾಲದಲ್ಲಿ 4 ಸಾವಿರ ಕೋಟಿ ಸಾಲವನ್ನು ಮರುಪಾವತಿ ಮಾಡುವುದಾಗಿ ಮಲ್ಯ ಅವರು ಸುಪ್ರೀಂಗೆ ತಿಳಿಸಿದ್ದರು. ಅವರ ಒಟ್ಟು ಸಾಲದ ಮೊತ್ತ ೯ ಸಾವಿರ ಕೋಟಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.