ಬೆಳ್ತಂಗಡಿ : ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾದಾಗ ಒಮ್ಮೆಗೆ ಎಂತಹವರೂ ಭಯಭೀತರಾಗಬಹುದು. ಆದರೆ ಆತ್ಮವಿಶ್ವಾಸ, ಆತ್ಮಸ್ತೈರ್ಯದ ಮುಂದೆ ಅವು ವಿಜೃಂಬಿಸಲಾರವು ಎಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಭಿಪ್ರಾಯಪಟ್ಟರು.
ಅವರು ವಿಜಯರಾಘವ ಪಡ್ವೆಟ್ನಾಯರ ‘ಸಪ್ತತಿ’ ಅಭಿನಂದನಾ ಸಮಿತಿಯ ಆಶ್ರಯದಲ್ಲಿ ಸೇವಾಭಾರತಿ ಕನ್ಯಾಡಿ ಇದರ ಸಂಯೋಜನೆಯಲ್ಲಿ ಕರ್ನಾಟಕ ಕ್ಯಾನ್ಸರ್ ಸೊಸೈಟಿ ಬೆಂಗಳೂರು ಇದರ ಸಹಕಾರದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ, ಲಯನ್ಸ್ ಕ್ಲಬ್ ಬೆಳ್ತಂಗಡಿ, ತುಳು ಶಿವಳ್ಳಿ ಸಭಾ ಬೆಳ್ತಂಗಡಿ ತಾಲೂಕು, ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಮಹಾಸಭಾ ಬೆಳ್ತಂಗಡಿ, ಔಷಧಿ ವ್ಯಾಪಾರಿಗಳ ಸಂಘ ಬೆಳ್ತಂಗಡಿ, ಶ್ರೀ ಶಾರದಾ ಸೇವಾ ಟ್ರಸ್ಟ್ ಉಜಿರೆ ಮತ್ತು ಕೆವಿಜಿ ದಂತ ಮಹಾವಿದ್ಯಾಲಯ ಸುಳ್ಯ ಇವರ ಸಹಭಾಗಿತ್ವದಲ್ಲಿ ಉಜಿರೆ ಶಾರದ ಮಂಟಪದಲ್ಲಿ ನಡೆದ ಆರೋಗ್ಯ ಮಾಹಿತಿ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಎಲ್ಲಾ ಖಾಯಿಲೆಗಳಿಗೂ ಸೂಕ್ತ ಔಷಧಿಗಳಿರುವಾಗ ಸಕಾಲದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಸಂಘ ಸಂಸ್ಥೆಗಳು ನಡೆಸುವ ಆರೋಗ್ಯ ಮಾಹಿತಿ, ತಪಾಸಣಾ ಶಿಬಿರಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಂಡಾಗ ರೋಗಗಳ ಬಗ್ಗೆ ಮಾಹಿತಿ ದೊರೆತು ಭಯ ನಿವಾರಣೆಯಾಗುತ್ತದೆ ಎಂದರು.
ಉಜಿರೆ ಜನಾರ್ದನ ದೇವಾಲಯದ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ ಅವರು ಕ್ಯಾನ್ಸರ್ ಸಹಾಯತಾ ನಿಧಿಗೆ ಚಾಲನೆ ನೀಡಿದರು. ಶಿಬಿರದ ಅಧ್ಯಕ್ಷತೆಯನ್ನು ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್ ವಹಿಸಿದ್ದರು.
ವೇದಿಕೆಯಲ್ಲಿ ಸಪ್ತತಿ ಅಭಿನಂದನಾ ಸಮಿತಿ ಅಧ್ಯಕ್ಷ ಡಾ| ಬಿ. ಯಶೋವರ್ಮ, ಕರ್ನಾಟಕ ಕ್ಯಾನ್ಸರ್ ಸೊಸೈಟಿ ಸಂಸ್ಥಾಪಕ ಡಾ| ಸಿ.ಕೆ.ಎ.ಎನ್. ಶಾಸ್ತ್ರಿ, ಸೊಸೈಟಿ ಅಧ್ಯಕ್ಷೆ ಡಾ| ವಿಜಯಲಕ್ಷ್ಮೀ ದೇಶಮುಖ್, ಉಪಾಧ್ಯಕ್ಷ ಡಾ| ಎಂ.ಆರ್. ಕುಲಕರ್ಣಿ, ಹೆಚ್.ವಿ. ಸುರೇಶ್, ಸಂಯೋಜಕ ಎಂ.ಎನ್. ಗುಂಡೂರಾವ್, ಡಾ| ಅನಿತಾ ದಯಾಕರ್, ಶಾರದಾ ಟ್ರಸ್ಟ್ನ ಭರತ್ ಕುಮಾರ್, ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಡಿ. ಜಗದೀಶ್ ಮತ್ತಿತರರು ಇದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ಶೆಟ್ಟಿ ಪ್ರಸ್ತಾವಿಸಿದರು. ತುಳು ಶಿವಳ್ಳಿ ಸಭಾದ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಸ್ವಾಗತಿಸಿ, ರೋಟರಿ ಕ್ಲಬ್ನ ಅಧ್ಯಕ್ಷ ಮೇ|ಜ| ಎಂ.ವಿ. ಭಟ್ ವಂದಿಸಿದರು. ಕೆ. ಕೃಷ್ಣ ಆಚಾರ್ಯ ನಿರೂಪಿಸಿದರು. ಸೇವಾಭಾರತಿ ಸಂಯೋಜಕ ಹರೀಶ್ ರಾವ್ ಮುಂಡ್ರುಪ್ಪಾಡಿ ಕಾರ್ಯಕ್ರಮ ಸಂಯೋಜಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.