ನವದೆಹಲಿ: ಎಪ್ರಿಲ್ 15ರಿಂದ ದೆಹಲಿಯಲ್ಲಿ ಎರಡನೇ ಹಂತದ ಸಮ ಬೆಸ ಸಾರಿಗೆ ನಿಯಮ ಜಾರಿಯಾಗಲಿದೆ. ಈ ಬಾರಿ ಮಹಿಳಾ ಚಾಲಕಿಯರು ಮತ್ತು ಶಾಲಾ ಮಕ್ಕಳನ್ನು ಕರೆದೊಯ್ಯುವ ಪೋಷಕರಿಗೆ ನಿಯಮದಿಂದ ವಿನಾಯಿತಿಯನ್ನು ನೀಡಲಾಗಿದೆ.
ಈಗಾಗಲೇ ಜ.1ರಿಂದ 15ರವರೆಗೆ ಮೊದಲ ಹಂತದ ಸಮ ಬೆಸ ನಿಯಮ ಜಾರಿಗೊಳಿಸಿದ್ದ ದೆಹಲಿಯ ಎಎಪಿ ಸರ್ಕಾರ ಅದರಲ್ಲಿ ಯಶಸ್ಸನ್ನು ಕಂಡಿತ್ತು. ಈ ಹಿನ್ನಲೆಯಲ್ಲಿ ಎರಡನೇ ಹಂತವನ್ನು ಭಾರೀ ಹುಮ್ಮಸ್ಸಿನಿಂದ ಜಾರಿಗೊಳಿಸುತ್ತಿದೆ.
ಮೊದಲ ಹಂತದಲ್ಲೂ ಮಹಿಳಾ ಡ್ರೈವರ್ಗಳಿಗೆ ನಿಯಮದಿಂದ ವಿನಾಯಿತಿ ನೀಡಲಾಗಿತ್ತು. ಈ ಬಾರಿ ಶಾಲಾ ಸಮವಸ್ತ್ರ ತೊಟ್ಟ ಮಕ್ಕಳನ್ನು ಕರೆದೊಯ್ಯುವ ಪೋಷಕರಿಗೂ ವಿನಾಯಿತಿ ನೀಡಲಾಗಿದೆ.
ವಾಯುಮಾಲಿನ್ಯವನ್ನು ತಡೆಗಟ್ಟುವುದಕ್ಕಾಗಿ ಎಎಪಿ ಸರ್ಕಾರ ಈ ನಿಯಮವನ್ನು ಜಾರಿಗೊಳಿಸಿದೆ.
ಕೇಂದ್ರ ಇಂಧನ ಸಚಿವ ಧರ್ಮೆಂದ್ರ ಪ್ರಧಾನ್ ಎಎಪಿ ವಿರುದ್ಧ ಹರಿಹಾಯ್ದಿದ್ದು, ಚೀಪ್ ಪಬ್ಲಿಸಿಟಿಗಾಗಿ ಇದನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.