ನವದೆಹಲಿ: ಅಪೌಷ್ಠಿಕ ಆಹಾರ ಪದಾರ್ಥಗಳು ಮತ್ತು ಸಕ್ಕರೆ ಪೂರಿತ ಪಾನೀಯಗಳಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ತೆರಿಗೆ ಹೆಚ್ಚಿಸಲಿದೆ. ಈ ಆಹಾರ ಪದಾರ್ಥಗಳ ಜಾಹೀರಾತಿಗೂ ಕಠಿಣ ನೀತಿ ಜಾರಿಗೊಳಿಸಲಿದೆ.
ದೇಶದಲ್ಲಿ ಮಧುಮೇಹ ಘಟನೆಗಳು ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಲು ಸರ್ಕಾರ ಹೊಸ ಕ್ರಮಗಳನ್ನು ಜಾರಿಗೆ ತರಲು ಯೋಜಿಸಿದೆ. ಆರೋಗ್ಯ ಸಚಿವಾಲಯ ಹಾಗೂ ಕೇಂದ್ರ ಆರೋಗ್ಯ ಸುರಕ್ಷತೆ ನಿಯಂತ್ರಕವು ಅನಾರೋಗ್ಯಕರ ಆಹಾರ ಮತ್ತು ಪಾನೀಯ ಮಾರಾಟ ನಿಯಂತ್ರಿಸಲು ಕಾರ್ಯ ರೂಪಿಸುತ್ತಿವೆ. ಅಪೌಷ್ಠಿಕ ಆಹಾರ ಮಧುಮೇಹ ಮತ್ತು ಬೊಜ್ಜು ಹೆಚ್ಚಲು ಕಾರಣವಾಗಿದೆ.
ಇತರರಿಗೆ ಹರಡದಂತಹ ರೋಗಗಳಾದ ಮಧುಮೇಹ ಮತ್ತು ಕ್ಯಾನ್ಸರ್ ತಡೆಗೆ ಪ್ರಯತ್ನ ನಡೆಸಲಾಗುತ್ತಿದೆ. ಸಚಿವಾಲಯಗಳ ಪ್ರತಿಕ್ರಿಯೆಗಳನ್ನು ಹಣಕಾಸು ಸಚಿವಾಲಯ ಮತ್ತು ಪ್ರಧಾನಿ ಸಚಿವಾಲಯದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.