ನವದೆಹಲಿ: ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಭಾರತ ಮತ್ತು ಅಮೇರಿಕ ಯುದ್ಧ ವಿಮಾನಗಳ ನಿರ್ಮಾಣಕ್ಕೆ ಚಿಂತನೆ ನಡೆಸುತ್ತಿದೆ. ಅದು ಬೋಯಿಂಗ್ ಹಾಗೂ ಲಾಕ್ಹೀಡ್ ಮಾರ್ಟಿನ್ (ಎಲ್ಎಮ್) ಮಂಗಳವರ ಜಂಟಿಯಾಗಿ ಎರಡೂ ರಾಷ್ಟ್ರಗಳ ಉನ್ನತ ರಕ್ಷಣಾ ಅಧಿಕಾರಿಗಳನ್ನು ಭೇಟಿ ಮಾಡಿವೆ. ವಾಯು ಸೇನೆ ತನ್ನ ಉಪಯೋಗಕ್ಕಾಗಿ ಸ್ವದೇಶಿ ವಿಮಾನ ನಿರ್ಮಿಸಲಿದ್ದು, ಮಾತುಕತೆ ಹಂತದಲ್ಲಿದೆ.
ಬೋಯಿಂಗ್ ಹಾಗೂ ಲಾಕ್ಹೀಡ್ ಭಾರತೀಯ ವಾಯುಸೇನೆಗೆ ಅನುಕೂಲಕರವಾಗುವಂತೆ ದೇಶೀಯವಾಗಿ ಎಫ್ 16 ’ಸೂಪರ್ ವೈಪರ್’ ಮತ್ತು ಎಫ್/ಎ 18 ’ಸೂಪರ್ ಹಾರ್ನೆಟ್’ ಯುದ್ಧ ವಿಮಾನಗಳನ್ನು ತಯಾರಿಸಲು ಮುಂದಾಗಿವೆ.
ಅಂತಾರಾಷ್ಟ್ರೀಯ ಸಹಕಾರಗಳ ನಿರ್ದೇಧಶಕ ಕೀತ್ ವೆಬ್ಸ್ಟರ್ ಉಪಸ್ಥಿತಿಯಲ್ಲಿ ಔಪಚಾರಿಕ ಮಾತುಕತೆ ನಡೆಸಲಾಗಿದ್ದು, ವಿದೇಶಿ ಯುದ್ಧ ವಿಮಾನಗಳನ್ನು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ತಯಾರಿಸುವಲ್ಲಿ ಮೊದಲ ಹೆಜ್ಜೆ ಇಟ್ಟಂತಾಗಿದೆ.
ಬೋಯಿಂಗ್ ಮತ್ತು ಲಾಕ್ಹೀನ್ ಭಾರತದಲ್ಲಿ ವಿಮಾನ ತಯಾರಿಸಲು ತಮ್ಮ ಆಸಕ್ತಿ ವ್ಯಕ್ತಪಡಿಸಿವೆ.
ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ಅಮೇರಿಕದ ರಕ್ಷಣಾ ಕಾರ್ಯದರ್ಶಿ ಆಷ್ಟನ್ ಕಾರ್ಟರ್ ಎ.12ರಂದು ವಿಮಾನ ತಯಾರಿಕಾ ಸಂಸ್ಥೆ ಜೊತೆ ಮಾತುಕತೆ ನಡೆಸಲಿದ್ದು, ಆ ಬಳಿಕ ಿದರ ಬಗ್ಗೆ ಸ್ಪಷ್ಟನೆ ಬರಲಿದೆ.
ಈ ಹಿಂದೆ ಅಮೇರಿಕ ಭೇಟಿಯ ಸಂದರ್ಭ ಆಷ್ಟನ್ ಕಾರ್ಟರ್ ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಜೊತೆ ರಕ್ಷಣಾ ಸಾಮಗ್ರಿಗಳ ಮಾಹಿತಿಯನ್ನು ನೀಡಲು ತನ್ನ ಹೆಚ್ಚಿನ ಸಮಯವನ್ನು ನೀಡಿದ್ದು, ಇದು ಜಗತ್ತಿನ ಹುಬ್ಬೇರಿಸುವಂತೆ ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.