ನವದೆಹಲಿ: ಪಠಾನ್ಕೋಟ್ ದಾಳಿಯ ತನಿಖೆಗೆ ಭಾರತಕ್ಕೆ ಆಗಮಿಸಿದ್ದ ಪಾಕಿಸ್ಥಾನದ ಜಂಟಿ ತನಿಖಾ ತಂಡಕ್ಕೆ ಭಾರತ ಸಹಕಾರ ನೀಡಲಿಲ್ಲ, ಅಲ್ಲದೇ ಬಲಿಷ್ಠ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ಭಾರತ ವಿಫಲವಾಗಿದೆ ಎಂಬ ಪಾಕಿಸ್ಥಾನದ ಆರೋಪವನ್ನು ರಾಷ್ಟ್ರೀಯ ತನಿಖಾ ದಳ ತಳ್ಳಿ ಹಾಕಿದೆ.
ಇಂಟರ್ಸೆಫ್ಟ್ಸ್, ಫೋನ್ ರೆಕಾರ್ಡ್, ಉಗ್ರರ ಡಿಎನ್ಎ ರೂಪದಲ್ಲಿ ಭಾರತ ಬಲಿಷ್ಠ ಸಾಕ್ಷ್ಯಾಧಾರಗಳನ್ನೇ ಪಾಕ್ ತಂಡಕ್ಕೆ ನೀಡಿದೆ, ಅಲ್ಲದೇ ಉಗ್ರರ ಮೃತ ದೇಹವನ್ನು ನೋಡುವ ಅವಕಾಶವನ್ನೂ ನೀಡಿದ್ದೆವು ಆದರೆ ಅವರೇ ಅದನ್ನು ತಿರಸ್ಕರಿಸಿದ್ದರು ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ.
ಅಲ್ಲದೇ ಪಾಕ್ ತನಿಖಾ ತಂಡ ಕೇಳಿದ ಎಲ್ಲಾ ಹೆಚ್ಚುವರಿ ಮಾಹಿತಿಯನ್ನು ಅವರಿಗೆ ನೀಡಲಾಗಿದೆ.
ಗೊಂದಲಗಳನ್ನು ಸೃಷ್ಟಿಸುವ ಅಂಶಗಳು ಪಾಕಿಸ್ಥಾನದ ಒಳಗೆಯೇ ಇದೆ, ಆದರೆ ಎನ್ಐಎ ಅದರ ಟ್ರ್ಯಾಪ್ಗೆ ಬಲಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಪಾಕಿಸ್ಥಾನಸೇನೆ ಮತ್ತು ಐಎಸ್ಐ ಸದಾ ಡಬಲ್ ಸ್ಟ್ಯಾಂಡರ್ಡ್ ಅನುಸರಿಸುತ್ತದೆ ಎಂದು ಆರೋಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.