ನವದೆಹಲಿ: ಭಾರತದ ವೇಗದ ರೈಲು ’ದೆಹಲಿ-ಆಗ್ರಾ ಗತಿಮಾನ್ ಎಕ್ಸ್ಪ್ರೆಸ್ ಮಂಗಳವಾರದಿಂದ ಕಾರ್ಯಾರಂಭ ಮಾಡಲಿದೆ. ದೆಹಲಿ ಮತ್ತು ಆಗ್ರಾದ ಮಧ್ಯೆ ಇದು ಚಲಿಸಲಿದೆ.
ಗತಿಮಾನ್ ಎಕ್ಸ್ಪ್ರೆಸ್ ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸಲಿದೆ. 100 ನಿಮಿಷದಲ್ಲಿ ಇದು 210 ಕಿ.ಮೀ ಪ್ರಯಾಣವನ್ನು ಮುಗಿಸಲಿದೆ.
ಈ ರೈಲಿಗೆ 12 ಎಸಿ ಕೋಚ್ಗಳಿದ್ದು, ಪ್ರತಿ ಬೋಗಿಯಲ್ಲೂ ಹೋಸ್ಟೆಸ್ಗಳಿರಲಿದ್ದಾರೆ, ಫ್ರೀ ವೈಫೈ ಸೌಲಭ್ಯವಿರಲಿದೆ. ಅಟೋಮ್ಯಾಟಿಕ್ ಡೋರ್ ಸೇರಿದಂತೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹಲವಾರು ಸುಸಜ್ಜಿತ ವ್ಯವಸ್ಥೆಗಳಿವೆ.
ನಾಳೆ ಬೆಳಿಗ್ಗೆ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಈ ರೈಲನ್ನು ಉದ್ಘಾಟನೆ ಮಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.