ಕಾರ್ಕಳ : ಕರ್ನಾಟಕ ರಾಜ್ಯ ದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಗೊಂದಲಗಳನ್ನು ಸೃಷ್ಟಿ ಮಾಡಿ ಸಾಮಾನ್ಯ ಜನರ ಬದುಕಿನಲ್ಲ ನೆಮ್ಮದಿ ಇಲ್ಲದಂತೆ ಮಾಡಿದೆ. ಸರ್ಕಾರದ ತಪ್ಪು ನೀತಿ ನಿರೂಪಣೆಗಳಿಂದ ಜನರ ದೈನಂದಿನ ಬದುಕು ದುಸ್ತರವಾಗಿ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ವಿಕಾಸದಲ್ಲಿ ನಡೆದ ತಾಲೂಕು ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ಮಾನ್ಯ ಡಿ.ವಿ.ಸದಾನಂದ ಗೌಡ ಜಾರಿಗೆ ತಂದಿದ್ದ 94ಸಿ ತಿದ್ದುಪಡಿ ಕಾನುನಿನಡಿಯಲ್ಲಿ ಸರ್ಕಾರಿ ಜಾಗದಲ್ಲಿ ನೆಲೆಸಿರುವವರಿಗೆ ಹಕ್ಕು ಪತ್ರಗಳನ್ನು ನೀಡಬೇಕಾಗಿದ್ದ ಈಗಿನ ಸರ್ಕಾರ ಕೇವಲ ಅರ್ಜಿಗಳನ್ನು ಮಾತ್ರ ಪಡೆದು ಸುಮ್ಮನೆ ಕುಳಿತಿದೆ. ಗ್ರಾಮ ಪಂಚಾಯತುಗಳು ಕಟ್ಟಡ ಪರವಾನಿಗೆ ನೀಡುವ ಅಧಿಕಾರವನ್ನು ಕಸಿದುಕೊಂಡ ಸರ್ಕಾರ ಯಾವುದೇ ಪರಿಹಾರ ಮಾರ್ಗೋಪಾಯಗಳನ್ನು ಘೋಷೀಸದೇ ಉದಾಸೀನತೆ ತೋರಿರುವುದರಿಂದ ಅದೇಷ್ಟೋ ಬಡ ಕುಟುಂಬದ ಜನರು ಸಾಲ ಮಾಡಿಯಾದರೂ ಮನೆ ಕಟ್ಟಲಾಗದೇ ತೀವೃ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಸವ ವಸತಿ ಇಂದಿರಾ ಆವಾಸ್ ಮನೆಗಳ ಮಂಜೂರಾತಿಯಲ್ಲಿ ಹಿಂದಿನ ಸರ್ಕಾರ ನೀಡಿದ ಮನೆಗಳ ಸಂಖ್ಯೆಗಳ ಮಿತಿಗಿಂತ ಕಡಿಮೆ ಗೊಳಿಸಿಯೂ ಪೂರ್ಣ ಪ್ರಮಾಣದ ಹಣ ಬಿಡುಗಡೆ ಮಾಡದೇ ತೊಂದರಗೀಡು ಮಾಡಿರುವುದು ಅತ್ಯಂತ ದುರದೃಷ್ಟಕರ ಸಂಗತಿ.
ಮುಂದುವರಿದ ರೆಶಾನ್ ಕಾರ್ಡ್ ಗೊಂದಲ, ಫಾರ್ಮ್ನಂ 9/11 ಅಸಂಬದ್ದ ನಡೆ, ಕುಡಿಯುವ ನೀರಿಗೆ ಹಣ ಬಿಡುಗಡೆಗೆ ತಡೆ, ಜಾತಿ ಮತ್ತು ಶೈಕ್ಷಣಿಕ ಗಣತಿಯಲ್ಲಿ ಅಸ್ಪಷ್ಟತೆ ಇಂತಹ ಅನೇಕಾನೇಕ ವೈಫಲ್ಯಗಳನ್ನು ಮೈಮೇಲೆ ಹೊದ್ದುಕೊಂದು ನಿದ್ರಾವಸ್ಥೆಯಲ್ಲಿ ಮಲಗಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಕಾರ್ಕಳದ 29 ಗ್ರಾಮ ಪಂಚಾಯತ್ಗಳಿಂದ ಬಿ.ಜೆ.ಪಿ ಪಕ್ಷದ ಕಾರ್ಯಕರ್ತರು ಮತ್ತು ನೊಂದ ಸಾರ್ವಜನಿಕರೊಂದಿಗೆ ಒಗ್ಗಟ್ಟಿನ ಪ್ರತಿಭಟನೆಯನ್ನು ಏ.೨೭ರಂದು ಬೆಳಗ್ಗೆ 10.00 ಗಂಟೆಗೆ ಕಾರ್ಕಳದ ತಾಲೂಕು ಕಛೇರಿ ಮುಂಭಾಗದಲ್ಲಿ ಆಯೋಜಿಸಲು ತಿರ್ಮಾನಿಸಲಾಗಿದೆ. ಪ್ರತಿಭಟನೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಹಕ್ಕೊತ್ತಾಯವನ್ನು ಮಂಡಿಸಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ ಕ್ಷೇತ್ರಾಧ್ಯಕ್ಷರಾದ ಮಣಿರಾಜ್ ಶೆಟ್ಟಿಯವರು ಮಾತನಾಡಿ ಗ್ರಾಮಿಣ ಭಾಗದ ಬಡ ಜನರಿಗೆ ನ್ಯಾಯ ದೊರಕಿಸಿಕೊಡುವ ಪ್ರತಿಭಟನೆ ಇದಾಗಿದ್ದು ಪ್ರತೀ ಗ್ರಾಮದಲ್ಲಿಯೂ ಜನರು ವ್ಯವಸ್ಥೆಯ ವಿರುದ್ದ ಆಕ್ರೋಶಿತರಾಗಿದ್ದು ಸುಮಾರು ೫ರಿಂದ ೬ ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಬೋಳ ಸದಾಶಿವ ಶೆಟ್ಟಿ, ಪ್ರದೀಪ್ ಕೋಟ್ಯಾನ್, ಸುರೇಶ್ ಮಡಿವಾಳ್, ಮುಟ್ಲುಪಾಡಿ ಸತೀಶ್ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಮಹಾವೀರ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.ತಾಲೂಕು ಯುಮೋರ್ಚಾದ ಅಧ್ಯಕ್ಷರಾದ ನವೀನ್ ನಾಯಕ್ ಸ್ವಾಗತಿಸಿ ಕಾರ್ಯ ಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.