ಬೆಳ್ತಂಗಡಿ : ಜಿಲ್ಲಾ ಅಂಧರ ಸೇವಾ ಸಂಘ ಮತ್ತು ಉಜಿರೆಯ ಅರಿಪ್ಪಾಡಿ ಮಠದ ಎ ಮತ್ತು ಬಿ ಕಟ್ಟಡದ ವ್ಯಾಪಾರಿ ವೃಂದದ ನೇತೃತ್ವದಲ್ಲಿ ಉಜಿರೆ ಮುಖ್ಯ ರಸ್ತೆಯಲ್ಲಿರುವ ಅರಿಪ್ಪಾಡಿ ಮಠ ಕಾಂಪ್ಲೆಕ್ಸ್ ಆವರಣದಲ್ಲಿ ಅಂಧರ ಸೇವಾ ಸಂಘದ 211 ನೇ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಮಾ. 27 ರಂದು ಏರ್ಪಡಿಸಲಾಗಿದೆ ಎಂದು ಕಾಂಪ್ಲೆಕ್ಸ್ ಮಾಲಕ ಬಾಲಕೃಷ್ಣ ಅರಿಪ್ಪಾಡಿತ್ತಾಯ ತಿಳಿಸಿದರು.
ಅವರು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಶಿಬಿರದ ವಿವರ ನೀಡಿದರು. ಶಿಬಿರ ಪೂರ್ವಾಹ್ನ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರಿಗೆ ನಡೆಯಲಿದೆ. ಶಿಬಿರದಲ್ಲಿ ಶಿಬಿರಾರ್ಥಿಗಳ ಕಣ್ಣುಗಳ ಪರೀಕ್ಷೆ, ಔಷಧಗಳ ಪೂರೈಕೆ ಮಾಡಲಾಗುವುದು. ಕನ್ನಡಕಗಳನ್ನು ಒಂದು ತಿಂಗಳ ಬಳಿಕ ಅಂದರೆ ಎ.24 ರಂದು ಶಿಬಿರ ನಡೆದ ಸ್ಥಳದಲ್ಲಿಯೇ ನೀಡಲಾಗುವುದು. ಕೇಟರಾಕ್ಟ್ ಶಸ್ತ್ರಚಿಕಿತ್ಸೆ ಮತ್ತು ಅಂತಃಶ್ಚಕ್ಷು ಮಸೂರದ ಅಳವಡಿಕೆಯು ಅಗತ್ಯವಿದ್ದವರಿಗೆ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮತ್ತು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುವುದಲ್ಲದೆ ಇದೇ ಆಸ್ಪತ್ರೆಯಲ್ಲಿ ಅತಿ ಸೂಕ್ಷ್ಮಕಾರ್ನಿಯಾದ ಕಸಿಕಟ್ಟುವಿಕೆಯನ್ನೂ ನಡೆಸಲಾಗುವುದುಎಂದರು.
ಈ ಸೇವೆ ಸಂಪೂರ್ಣ ಉಚಿತವಾಗಿದ್ದು ಜಾತಿ, ಮತ, ಲಿಂಗ ಭೇಧವಿಲ್ಲದೆ ಎಲ್ಲರಿಗೂ ಲಭ್ಯ. ನೇತ್ರ ತಜ್ಞರಾದ ಡಾ.ಜಯರಾಮ ಶೆಟ್ಟಿ, ಡಾ. ಹೃಷಿಕೇಶ್ ಅಮೀನ್, ಡಾ. ನೆಲ್ಲಿ ನಝರತ್ಅವರ ಸೇವೆಯನ್ನು ಬಳಸಿಕೊಂಡು ತಮ್ಮದೃಷ್ಟಿಯನ್ನು ಉಳಿಸಿ ಬೆಳೆಸಿಕೊಳ್ಳಿ ಎಂದು ಅವರು ವಿನಂತಿಸಿದರಲ್ಲದೆ ಮೊದಲು ನೋಂದಾಯಿಸಿದ 150 ಮಂದಿಗೆ ಪ್ರಾಶಸ್ತ್ಯ ನೀಡಲಾಗುವುದುಎಂದರು.
ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಶಿಕ್ಷಕ ಮುರಳಿಕೃಷ್ಣ ಆಚಾರ್ಯ ಅವರು ಶಸ್ತ್ರಚಿಕಿತ್ಸೆಗೆ ಒಳಪಡುವ ಎಲ್ಲರನ್ನೂ ಮಂಗಳೂರಿಗೆ ಕರೆದು ಕೊಂಡು ಹೋಗುವ ಮತ್ತು ಹಿಂದಕ್ಕೆ ಕರೆ ತರುವ ವ್ಯವಸ್ಥೆ ಮಾಡಲಾಗುವುದು. ಶಿಬಿರದ ವ್ಯವಸ್ಥೆಗಾಗಿ ಬಾಲಕೃಷ್ಣ ಅರಿಪ್ಪಾಡಿತ್ತಾಯ ಮತ್ತು ಕಾಂಪ್ಲೆಕ್ಸ್ಗಳಲ್ಲಿ ಇರುವ ಎಸ್.ಬಿ.ಐ., ಕೆನರಾ ಬ್ಯಾಂಕ್, ದಿಶಾ ಫುಡ್ಕಾರ್ನರ್, ಸಂಪೂರ್ಣ ಟೆಕ್ಸ್ಟೈಲ್ಸ್, ಜನಾರ್ದನ ಸ್ವಾಮಿ ಕ್ರೆಡಿಟ್ ಕೋಪರೇಟಿವ್ ಸೊಸೈಟಿಆರ್ಥಿಕ ನೆರವು ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9449075792 ಹಾಗೂ 9449079754 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.