ಬೆಳ್ತಂಗಡಿ : ಮರೋಡಿ ಗ್ರಾಮದ ಭಾಗ್ಯಶ್ರೀ ಅಸಹಜ ಸಾವಿನ ಪ್ರಕರಣದಲ್ಲಿ ದಿನಕ್ಕೊಂದರೆಂತೆ ಹೊಸ ತಿರುವುಗಳು ಲಭಿಸುತ್ತಿದೆ. ಗುರುವಾರ ಘಟನೆ ನಡೆದ ಮನೆಯ ಅಟ್ಟದ ಮೇಲೆ ಮನೆಯವರು ಕಸ ಗುಡಿಸುವ ವೇಳೆ ಚೀಟಿಯೊಂದು ಸಿಕ್ಕಿದೆಯೆನ್ನಲಾಗುತ್ತಿತ್ತು ಈ ಚೀಟಿಯನ್ನು ವೇಣೂರು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದು ಆ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದಾರೆ.
ಗುರುವಾರ ಸಿಕ್ಕಿದೆಯೆನ್ನಲಾಗಿರುವ ಚೀಟಿಯಲ್ಲಿ ಸ್ಧಳೀಯ ವ್ಯಕ್ತಿಯೊಬ್ಬರ ಹೆಸರನ್ನು ಬರೆದಿದೆ ಎನ್ನಲಾಗಿದೆ ಈತನ್ನು ಈ ಹಿಂದೆಯೆ ಪೋಲೀಸರು ವಿಚಾರಣೆ ನಡೆಸಿದ್ದರೆಂದು ತಿಳಿದು ಬಂದಿದೆ. ಇದೀಗ ಈತನನ್ನು ಮತ್ತೆ ಪೋಲೀಸರು ವಶಕ್ಕೆ ತೆಗೆದುಕೊಂಡು ಮತ್ತಷ್ಟು ವಿಚಾರಣೆಗೆ ಗುರಿಪಡಿಸುತ್ತಿದ್ದಾರೆ. ಆದರೆ ಈಗ ದೊರೆತಿರುವ ಪತ್ರದ ಬಗ್ಗೆಯು ಅನುಮಾನಗಳು ವ್ಯಕ್ತವಾಗುತ್ತಿದೆ, ಕೇವಲ ಎರಡು ಸಾಲಿನ ಪತ್ರ ಇದಾಗಿದೆ ಇದರಲ್ಲಿ ಹೆಚ್ಚಿನ ಮಾಹಿತಿಗಳು ಇಲ್ಲವಾಗಿದೆ. ಈ ಹಿನ್ನಲೆಯಲ್ಲಿ ಪೋಲೀಸರು ಇದು ಈಕೆಯ ಕೈಬರಹವೇ ಎಂದು ಪರಿಶೀಲಿಸುತ್ತಿದ್ದಾರೆ.
ಪೋಲೀಸರು ಬೇರೆ ಬೇರೆ ದೃಷ್ಟಿಕೋನಗಳಲ್ಲಿ ತನಖೆಯನ್ನು ಮುಂದುವರಿಸುತ್ತಿದ್ದು ಈಕೆಯ ಮೊಬೈಲ್ ಫೋನಿನಿಂದ ಪೋಲೀಸರಿಗೆ ಹಲವಾರು ಮಾಹಿತಿಗಳು ದೊರೆತಿದ್ದು ಅದನ್ನಿಟ್ಟುಕೊಂಡು ಹಲವರು ವ್ಯಕ್ತಿಗಳ ಚಲನ ವಲನಗಳನ್ನು ನಿರೀಕ್ಷಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪೋಲೀಸ್ ತನಿಖೆ ಒಂದು ಹಂತಕ್ಕೆ ಬಂದಿದೆಯೆನ್ನುವಾಗ ದೊರೆತಿರುವ ಈ ಚೀಟಿ ಪ್ರಕರಣವನ್ನು ಇನ್ನಷ್ಟು ಜಟಿಲವಾಗಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.