ಬೆಳ್ತಂಗಡಿ : ಲಾಯಿಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆದಿಲ್ಲ. ನೀರಿನ ವ್ಯವಸ್ಥೆ, ಶೌಚಾಲಯ, ಹದಗೆಟ್ಟ ರಸ್ತೆಗಳು, ದಾರಿದೀಪ ಮೊದಲಾದ ಸಮಸ್ಯೆಗಳನ್ನು ಇಲ್ಲಿನ ಜನರು ಎದುರಿಸುತ್ತಿದ್ದಾರೆ. ಲಾಯಿಲಾ ಗ್ರಾ.ಪಂ.ಗೆ ಮನವಿಗಳನ್ನು ನೀಡಿದ್ದರೂ ಯಾವುದೇ ಸ್ಪಂದನೆ ಇಲ್ಲವಾಗಿದ್ದು, ಇದನ್ನು ವಿರೋಧಿಸಿ ಮಾ.14ರಂದು ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸಂಘಟನೆಯ (ಅಂಬೇಡ್ಕರ್ ವಾದ) ಸದಸ್ಯ ನಾಗರಾಜ್ ಎಸ್. ಲಾಯಿಲಾ ಹೇಳಿದರು.
ಅವರು ಶುಕ್ರವಾರ ಬೆಳ್ತಂಗಡಿ ವಾರ್ತಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು.ಕಕ್ಕೆನ ರಸ್ತೆಡಾಮರೀಕರಣ, ಅಂಬೇಡ್ಕರ್ ನಗರಕ್ಕೆ ಹೋಗುವ ರಸ್ತೆಯಲ್ಲಿ ಕಾಲುಸಂಕ ರಚನೆ, ಜೋಗಿ ಕಾಲೋನಿಯಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು, ಗುರಿಕಾಣರಸ್ತೆಗೆ ದಾರಿದೀಪ ಅಳವಡಿಸಬೇಕು. ಪುತ್ರಬೈಲು ಅಂಗನವಾಡಿ ಕೇಂದ್ರ ದುರಸ್ಥಿಗೊಳಿಸಬೇಕು, ಪುತ್ರಬೈಲು ಸಮಾಜಮಂದಿರದಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕು ಹಾಗೂ ಇನ್ನಿತರ ಬಾಕಿ ಉಳಿದಿರುವ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯದೆ ಜನ ಪರದಾಡುತ್ತಿದ್ದು ಇದಕ್ಕಾಗಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಪಂಚಾಯತ್ಗೆ ಬರುವ ಎಸ್ಸಿ, ಎಸ್ಟಿ ಅನುದಾನ ಬಳಕೆಯಾಗುತ್ತಿಲ್ಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯೋರ್ವರು ಕಳೆದ 5 ವರ್ಷಗಳಿಂದ ಇಲ್ಲೇ ಠಿಕಾಣಿ ಹೂಡಿದ್ದು ಸಾರ್ವಜನಿಕರುಇವರ ವರ್ಗಾವಣೆಯನ್ನು ಬಯಸಿದರೆ ಇವರು ಗ್ರಾಮಸ್ಥರಿಂದ ಸಹಿ ಸಂಗ್ರಹಣಾ ಅಭಿಯಾನದಲ್ಲಿ ತೊಡಗಿದ್ದಾರೆ. ಕೂಡಲೇ ಇವರನ್ನು ವರ್ಗಾವಣೆಗೊಳಿಸಬೇಕು. ಗ್ರಾಮದ ಸಮರ್ಥಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದುಎಂದರು.
ಗೋಷ್ಠಿಯಲ್ಲಿ ಬೈರ ಸಂಘದ ಸೇವಾ ಸಮಿತಿ ಉಪಾಧ್ಯಕ್ಷ ಸುರೇಶ್ ಬಿ.ಎಸ್., ಮಹಮ್ಮಾಯಿ ಬೈರಯುವ ವೇದಿಕೆಯ ಅಧ್ಯಕ್ಷ ರಿತೇಶ್, ಕಕ್ಕೇನ ಮದರಸ ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಹಮ್ಮದ್ ಆಲಿ, ಸದಸ್ಯಅಶ್ರಫ್, ಕಕ್ಕೇನ ನಿವಾಸಿ ಅಬೂಬಕ್ಕರ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.