ಬೆಳ್ತಂಗಡಿ : ಬೆಳ್ತಂಗಡಿ ಸಮಾಜ ಮಂದಿರ ವಿಚಾರದ ವ್ಯಾಜ್ಯಕ್ಕೆ ಸಂಬಂಧಿಸಿ ರಂಜನ್ರಾವ್ ಯರ್ಡೂರ್ ಬಂಧನಕ್ಕೆ ನ್ಯಾಯಾಲಯವು ಮಾ.9 ಕ್ಕೆ ವಾರಂಟ್ ಜಾರಿಗೊಳಿಸಿದೆ ಎಂಬ ವರದಿಗೆ ಸ್ಪಷ್ಟೀಕರಣವನ್ನು ರಂಜನ್ರಾವ್ಯರ್ಡೂರು ನೀಡಿದ್ದಾರೆ.
ಬೆಳ್ತಂಗಡಿ ಸಮಾಜ ಮಂದಿರ ವಿಚಾರದಲ್ಲಿ ಪೊಲೀಸರಿಗೆ ರಂಜನ್ರಾವ್ ಸಲ್ಲಿಸಿದ ದೂರನ್ನು ವಿಚಾರಿಸಿ, ‘ಬಿ’ ರಿಪೋರ್ಟ್ ಸಲ್ಲಿಸಲಾಗಿತ್ತು. ಸಿವಿಲ್ ಸ್ವರೂಪದ ಪ್ರಕರಣ ಎಂದು ಹೇಳಿದ್ದರು. ಈ ಸಂಬಂಧ ಫೆ.9 ರಂದು ಆಕ್ಷೇಪ ಸಲ್ಲಿಸಲು ನ್ಯಾಯಾಲಯವು ಅವಕಾಶ ನೀಡಿರುತ್ತದೆ. ಆದರೆ ಈ ವಿಚಾರಣೆಯಾಗಿ ಬಿ ರಿಪೋರ್ಟ್ ನ್ಯಾಯಾಲಯದಿಂದ ಅಂತಿಮ ಅಂಗೀಕಾರವಾಗುವ ಮೊದಲೇ ಈ ರಿಪೋರ್ಟ್ ಆಧಾರದಲ್ಲಿಯೇ ಶ್ರಿ ವೀರೇಂದ್ರ ಹೆಗ್ಗಡೆ ಮತ್ತು ಶ್ರೀ ರತ್ನವರ್ಮ ಬುಣ್ಣು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಇದರ ತನಿಖೆ ಫೆ.18 ಕ್ಕೆ ನಿಗದಿಯಾಗಿತ್ತು. ಮಾನನಷ್ಟ ಮೊಕದ್ದಮೆ ಪ್ರಕರಣಗಳ ರದ್ಧತಿಕೋರಿ ರಂಜನ್ರಾವ್ ಮಾನ್ಯ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು ಫೆ.9 ರೊಳಗೆ ತಡೆಯಾಜ್ಞೆ ಸಿಗುವ ನಿರೀಕ್ಷೆ ಇದ್ದುದರಿಂದ ಬೆಂಗಳೂರಿನಲ್ಲಿರುವ ರಂಜನ್ರಾವ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಆದ್ದರಿಂದ ಕಾನೂನು ಪ್ರಕಾರ ವಾರಂಟ್ಜಾರಿಯಾಗಿದೆ. ಹೈಕೋರ್ಟ್ನಲ್ಲಿ ಅರ್ಜಿಗಳ ಸಂಖ್ಯೆ ಅಗಾಧವಾಗಿರುವುದರಿಂದ ರಂಜನ್ರಾವ್ ಅರ್ಜಿ ವಿಚಾರಣೆ ತಡವಾಗಿರುತ್ತದೆ. ವಕೀಲರ ಸಲಹೆ ಪಡೆದು ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇದೊಂದು ಸಮಾಜದ ಹಿತಾಸಕ್ತಿರಕ್ಷಣೆಯ ಕಾನೂನು ಹೋರಾಟವಾಗಿದ್ದು ಖಾಸಗಿ ಅಲ್ಲ.ಪೊಲೀಸರು ‘ಬಿ’ ರಿಪೋರ್ಟ್ ಹಾಕಿದ್ದನ್ನೇ ಸಾಕ್ಷ್ಯಾಧಾರ ಸಹಿತ ಪ್ರಶ್ನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.