ಬೆಳ್ತಂಗಡಿ: ನಮ್ಮ ಹೆಜ್ಜೆ ನಿತ್ಯನಿರಂತರವಾಗಿ ಆಧ್ಯಾತ್ಮಿಕ ಬೆಳಕಿನೆಡೆಗೆ ಸಾಗಬೇಕು. ಗಾಯತ್ರಿ ಮಂತ್ರದಿಂದ ಜಗತ್ತಿಗೆ ಹೊಸ ಬೆಳಕು ನೀಡಬೇಕು ಎಂಬ ತತ್ವಾರ್ಥ ದೊರೆಯುತ್ತದೆ. ವಿದ್ಯಾರ್ಥಿಗಳು ಇಲ್ಲಿನ ಮಠದಲ್ಲಿ ಸ್ವಯಂ ಮಂತ್ರದೃಷ್ಠರಾಗಿ ಇಲ್ಲಿ ಯಜ್ಞ ನಡೆಸುತ್ತಿದ್ದಾರೆ. ಒಂದು ವಾರದಲ್ಲಿ ೧೩೦ ವಿದ್ಯಾರ್ಥಿಗಳು ಗಾಯತ್ರಿ ಭೋಧೆ ಯಜ್ಞದ ಮಂತ್ರಗಳನ್ನು ಕಲಿತು ಯಜ್ಞ ನಡೆಸುತ್ತಿದ್ದಾರೆ ಎಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಅವರು ಕನ್ಯಾಡಿ ದೇವರಗುಡ್ಡೆ ಗುರುದೇವ ಆಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಡೆದ ಗಾಯತ್ರಿ ಯಜ್ಞದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಹರಿದ್ವಾರದ ಶಾಂತಿಕುಂಜದ ಗಾಯತ್ರಿ ಪರಿವಾರದ ಹಿರಿಯ ಸಾಧಕಿ ಕುಮಾರಿ ಎಂ. ಶೆಟ್ಟಿ ಮಾತನಾಡಿ ಮಕ್ಕಳಿಗೆ ಮಾತೃ ಭಾಷೆ ತಾಯಿಯಂತೆ. ಅನ್ಯ ಭಾಷೆ ಕಲಿಕೆ ಕಷ್ಟ್ಟವೇ ವಿನಃ ಮಾತೃ ಭಾಷಾ ಶಿಕ್ಷಣ ಹೊರೆಯಾಗಬಾರದು. ವಿದ್ಯಾರ್ಥಿಗಳು ತಮ್ಮ ಪ್ರೌಡಶಾಲಾ ಮಟ್ಟದಿಂದಲೇ ಶ್ರೇಷ್ಠವಾದ ಸನಾತನ ಭಾರತದ ಕೃಷಿ ಪರಂಪರೆಯ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡಲ್ಲಿ ಭವ್ಯ ಭಾರತದ ನಿರ್ಮಾಣದ ಶಿಲ್ಪಿಯಾಗುತ್ತಾನೆ ಎಂದರು.
ಸಾಧಕಿಯರಾದ ಜಯಲಕ್ಷ್ಮೀ ಶೆಟ್ಟಿ, ಜಾಹ್ನವಿ ಕರ್ಕೆರ, ಲೀಲ ಕುಂದರ್ ಮಾರ್ಗದರ್ಶನ ನೀಡದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ಶಿಕ್ಷಕರಿಗೆ ಪ್ರತ್ಯೇಕ ಕುಂಡಗಳನ್ನು ಅಳವಡಿಸಲಾಗಿತ್ತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ಕುಮಾರ್, ತಾ.ಪಂ.ಸದಸ್ಯ ಬಾಲಕೃಷ್ಣ ಶೆಟ್ಟಿ, ಕಲ್ಮಂಜ ಗ್ರಾ.ಪಂ.ಅಧ್ಯಕ್ಷ ಶಶಿದರ್, ಕೃಷ್ಣಪ್ಪ ಗುಡಿಗಾರ್, ಮೋಹನ್ ಉಜ್ಜೋಡಿ, ಎಂ. ಬಿ. ಜಯಶಂಕರ್, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಮುಂತಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.