ಮಂಗಳೂರು : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕಮಂಗಳೂರು ವಲಯ, ದ.ಕ. ಜಿಲ್ಲೆ ಮತ್ತು ಶಾರದಾ ವಿದ್ಯಾಲಯ ಕೊಡಿಯಾಲಬೈಲು ಶಾಖೆ ಇವರ ಸಹಯೋಗದೊಂದಿಗೆ ಶ್ರೀ ರಾಧಾಕೃಷ್ಣ ಮಂದಿರ ಬಾಲಂಭಟ್ ಹಾಲ್ ನಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿಯು ಮಾ 13ರಿಂದ ನಡೆಯಲಿದೆ
ಈ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿಯ 50ನೇ ಶಾಖೆಯು ಇದಾಗಿದ್ದು, ಈ ಕಾರ್ಯಕ್ರಮವು ಮಾ.13ರ ವಿವಾರ ಬೆಳಿಗ್ಗೆ ಘಂಟೆ 9-00ಕ್ಕೆ ಉದ್ಘಾಟನೆಗೊಳ್ಳಲಿದೆ. ಈ ಶಿಬಿರದಲ್ಲಿ 10ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಈ ತರಗತಿಯಲ್ಲಿ ಭಾಗವಹಿಸಬಹುದಾಗಿದೆ.
ಉಚಿತ ಯೋಗ ಶಿಕ್ಷಣದಿಂದ ಉದ್ವೇಗ, ಒತ್ತಡ, ಕಿಣ್ಣತೆ ಶಮನ, ಏಕಾಗ್ರತೆ, ನೆನಪಿನ ಶಕ್ತಿಯ ಚುರುಕಿಗೆ, ಸಂಧಿವಾತ ದೋಷ, ನಿದ್ದೆಯ ಸಮಸ್ಯೆ ಎಸಿಡಿಟಿ, ಮೂಲವ್ಯಾಧಿ, ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಗಂಟು ನೋವು, ಬೆನ್ನು ನೋವು, ಮೈಗ್ರಿನ್ ತಲೆನೋವು, ಮರೆವು ಇತ್ಯಾದಿ ರೋಗಗಳ ನಿವಾರಣೆ ಮತ್ತು ಹತೋಟಿಗೆ ಈ ಉಚಿತ ಯೋಗ ಶಿಬಿರವು ಸಹಕಾರಿಯಾಗಲಿದೆ.
ಕೇಂದ್ರ ಸಮಿತಿಯಿಂದಲೇ ಶಿಕ್ಷಣ ಪಡೆದ ನುರಿತ ಶಿಕ್ಷಕ ವರ್ಗದವರಿಂದ ಯೋಗಾಸನ, ಪ್ರಾಣಯಾಮ, ಧ್ಯಾನ, ಶರೀರ ಶುದ್ಧೀಕರಣ ಕ್ರೀಯೆ, ಅಗ್ನಿಹೋತ್ರ, ಅಕ್ಯುಪ್ರೆಶರ್ ಕ್ರೀಯೆಗಳು, ಸೂರ್ಯ ನಮಸ್ಕಾರ, ಯೋಗ ಚಿಕಿತ್ಸಾತ್ಮಕ ಕ್ರೀಯೆಗಳು, ಆಯುರ್ವೇದ ಆಹಾರ ಪದ್ಧತಿಗಳು, ಭಾಷಣ ಕಲೆ, ಭಜನೆ, ಸತ್ಸಂಗಗಳನ್ನು ಸಮಿತಿಯ ವತಿಯಿಂದ ಉಚಿತವಾಗಿ ಹೇಳಿಕೊಡಲಾಗುವುದು.
ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಬಂಧುಗಳು ಈ 50ನೇ ಶಾಖೆಯಲ್ಲಿ ಭಾಗವಹಿಸಿ ಆರೋಗ್ಯವಂತರಾಗಿ ಎಂದು ವಿನಂತಿಸಲಾಗಿದೆ ಎಂದು ಈ ಪತ್ರಿಕಾ ಪ್ರಕಟನೆಯನ್ನು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.