ನವದೆಹಲಿ: ಭಾರೀ ಕುತೂಹಲ ಕೆರಳಿಸಿರುವ ಭಾರತ-ಪಾಕಿಸ್ಥಾನ ನಡುವಣ ಟಿ೨೦ ವಿಶ್ವಕಪ್ ಪಂದ್ಯದ ಸ್ಥಳವನ್ನು ಐಸಿಸಿ ಧರ್ಮಶಾಲಾದಿಂದ ಈಡನ್ ಗಾರ್ಡನ್ಗೆ ಬುಧವಾರ ಸ್ಥಳಾಂತರ ಮಾಡಿದೆ.
ಸುದ್ದಿಗೋಷ್ಠಿ ನಡೆಸಿದ ಐಸಿಸಿ ಮುಖ್ಯಸ್ಥ ಡೇವಿಡ್ ರಿಚರ್ಡ್ಸನ್ ಅವರು ಈ ಸುದ್ದಿಯನ್ನು ಖಚಿತಪಡಿಸಿದ್ದು, ಧರ್ಮಶಾಲಾದ ಟಿಕೆಟ್ ಪಡೆದವರಿಗೆ ಹಣವನ್ನು ರಿಫಂಡ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹಿಮಾಚಲಪ್ರದೇಶ ಮುಖ್ಯಮಂತ್ರಿ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದ ಕಾರಣ ಹಲವಾರು ಗೊಂದಲಗಳು ಮೂಡಿದ್ದವು, ಇದೇ ಕಾರಣಕ್ಕೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಪಂದ್ಯವನ್ನು ಸ್ಥಳಾಂತರ ಮಾಡಬೇಕು ಎಂದು ಮನವಿ ಮಾಡಿಕೊಂಡಿತ್ತು.
ಇದೀಗ ಎಲ್ಲಾ ಗೊಂದಲಗಳು ನಿವಾರಣೆಯಾಗಿದ್ದು, ಪಶ್ಚಿಮಬಂಗಾಳದ ಈಡೆನ್ ಗಾರ್ಡನ್ನಲ್ಲಿ ಪಂದ್ಯ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.