ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮೂರನೇ ಬಜೆಟ್ನ್ನು ಮಂಡಿಸಿದ್ದಾರೆ. ಕೃಷಿ, ಉದ್ಯಮ, ಸಾಮಾಜಿಕ ವಲಯ, ಆರೋಗ್ಯ ವಲಯ ಹೀಗೆ ಎಲ್ಲಾ ವಲಯಗಳನ್ನೂ ತೃಪ್ತ ಪಡಿಸಲು ಅವರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ.
ಇಂದು ಮಂಡಿಸಲಾದ ಬಜೆಟ್ನ ಪ್ರಮುಖ ಅಂಶಗಳು
ಬೆಲೆ ಸ್ಥಿರತ ಕಾಪಾಡಿಕೊಳ್ಳಲು 900 ಕೋಟಿ, ಬೇಳೆ ಉತ್ಪಾದನೆಗೆ 500 ಕೋಟಿ
ಬ್ಯಾಂಕ್ ಗಳ ದಿವಾಳಿತನದ ನಿಯಂತ್ರಣಕ್ಕೆ ಅಗತ್ಯ ಕ್ರಮ
ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ.
ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ 35,984 ಕೋಟಿ ರೂ ಅನುದಾನ ನೀಡಲಾಗುತ್ತಿದೆ.
ನೀರಾವರಿ ಯೋಜನೆಗಳಿಗೆ 17ಸಾವಿರ ಕೋಟಿ ಅನುದಾನ ಮತ್ತು ಅಂರ್ತಜಲ ಅಭಿವೃದ್ಧಿಗೆ 60ಸಾವಿರ ಕೋಟಿ, ಇ ಮಾರ್ಕೆಟಿಂಗ್ ಗೆ 20 ಸಾವಿರ ಕೋಟಿ ಮೀಸಲು.
ಗ್ರಾಮ್ ಸಡಕ್ ಯೋಜನೆಗೆ 19 ಸಾವಿರ ಕೋಟಿ ರೂ ಅನುದಾನ, ಪರಂಪರಾಗತ್ ಕೃಷಿ ವಿಕಾಸ್ ಯೋಜನೆ ಜಾರಿಗೆ ಸರ್ಕಾರ ಬದ್ಧ.
ಕೃಷಿ ಸಾಲಕ್ಕೆ 9 ಲಕ್ಷ ಕೋಟಿ, ಮಣ್ಣು ಆರೋಗ್ಯ ಕಾರ್ಡ್ ಯೋಜನೆಗೆ 367 ಕೋಟಿ, ಇ ಮಾರ್ಕೆಟಿಂಗ್ ಗಾಗಿ 20 ಸಾವಿರ ಕೋಟಿ ಮೀಸಲಿಡಲಾಗುತ್ತದೆ
ಕೃಷಿ ಕ್ಷೇತ್ರಕ್ಕಾಗಿ 35,948 ಕೋಟಿ ರೂಪಾಯಿ ಅನುದಾನ. 28.5 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಗುರಿ.
ನೀರಾವರಿಗೆ 17 ಸಾವಿರ ಕೋಟಿ. 12ರಾಜ್ಯಗಳಲ್ಲಿ ಕೃಷಿ ಇ ಮಾರ್ಕೆಟ್ ಪ್ಲಾನ್ ಮತ್ತು ಬರ ನಿರ್ವಹಣೆ ವ್ಯವಸ್ಥೆ ಗೆ ದೀನ ದಯಾಳ್ ಮಿಷನ್.
2.5ಲಕ್ಷದಿಂದ 5 ಲಕ್ಷ ರೂ ಆದಾಯಕ್ಕೆ ಶೇ.10 ರಷ್ಟು ತೆರಿಗೆ, 5 -10ಲಕ್ಷ ರೂ ಆದಾಯಕ್ಕೆ ಶೇ.20 ರಷ್ಟು ತೆರಿಗೆ , 10ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ.30 ರಷ್ಟು ತೆರಿಗೆ
ಆಧಾರ್ ಕಾರ್ಡ್ ಮೂಲಕ ಸಾಮಾಜಿ ಯೋಜನೆಗಳು
ಪ್ರಸಕ್ತ ಆರ್ಥಿಕ ವರ್ಷದ ವೆಚ್ಚ 19.78 ಲಕ್ಷ ಕೋಟಿ, ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು
ಸಣ್ಣ ತೆರಿಗೆದಾರರಿಗೆ ರಿಲೀಫ್, ಮನೆ ಬಾಡಿಗೆ ತೆರಿಗೆ ವಿನಾಯ್ತಿ ಹೆಚ್ಚಳ, 24 ರಿಂದ 60 ಸಾವಿರಕ್ಕೆ ಏರಿಕೆ
ಒಂದೇ ದಿನದಲ್ಲಿ ಸ್ಟಾರ್ಟ್ ಅಪ್ಗಳ ನೋಂದಣಿಗೆ ಅವಕಾಶ
ಹೊಸ ಕಂಪನಿಗಳಿಗೆ ಒಂದೇ ದಿನದಲ್ಲಿ ಅನುಮತಿಗೆ ಕ್ರಮ
“ಏಕ್ ಭಾರತ್ ಶ್ರೇಷ್ಠ್ ಭಾರತ್” ಯೋಜನೆ ಜಾರಿಗೆ ಕ್ರಮ
ಹೊಸ ಕಂಪನಿಗಳ ಪ್ರಾರಂಭಕ್ಕೆ ಒಂದೇ ದಿನದಲ್ಲಿ ಅನುಮತಿಗೆ ಕ್ರಮ
ಬೇಳೆ ಉತ್ಪಾದನೆಗಾಗಿ 500 ಕೋಟಿ
ಬೇಳೆಯ ದರ ಸ್ಥಿರತೆ ಕಾಪಾಡಿಕೊಳ್ಳಲು 900 ಕೋಟಿ
ಆರ್ಬಿಐ ಕಾಯ್ದೆಯನ್ನು ಪರಿಷ್ಕರಿಸಲು ಸರ್ಕಾರದ ಚಿಂತನೆ. ಕಂಪೆನಿ ಯಾಕ್ಟ್ 2013ಕ್ಕೆ ತಿದ್ದುಪಡಿ.
ವೈಯಕ್ತಿಕ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಯಥಾಸ್ಥಿತಿ
ರೂ.2,5೦,೦೦೦ ಲಕ್ಷ ಆದಾಯ- ಆದಾಯ ತರಿಗೆ ಇಲ್ಲ
ಸಾರ್ವಜನಿಕರು ಪ್ರತಿನಿತ್ಯ ಅಂಗಡಿಗಳ ಬಾಗಿಲು ತೆರೆಯಲು ಸರ್ಕಾರಿ ಬ್ಯಾಂಕುಗಳಿಗೆ 25 ಸಾವಿರ ಕೋಟಿ, ಸಾರ್ವಜನಿಕ ಸಹಭಾಗಿತ್ವದ ಬ್ಯಾಂಕ್ ಗಳ ಉತ್ತೇಜನ
ಆದಾಯದ ಕೊರತೆ ಶೇ.2.5ಕ್ಕೆ ಇಳಿಸಲು ಸರ್ಕಾರ ಚಿಂತನೆ
ಕಡಿಮೆ ದರದಲ್ಲಿ ಪರ್ಯಾಯ ಇಂಧನ ಉತ್ಪಾದನೆ ಗುರಿ
2017ಕ್ಕೆ ವಿತ್ತೀಯ ಕೊರತೆ ಶೇ.3.5ರ ಗುರಿ ಹೊಂದಲಾಗಿದೆ.
ಮನೆ ಬಾಡಿಗೆ ತೆರಿಗೆ ವಿನಾಯ್ತಿ ರು. 60 ಸಾವಿರಕ್ಕೆ ಹೆಚ್ಚಳ, 24 ಸಾವಿರದಿಂದ 60 ಸಾವಿರಕ್ಕೆ ಏರಿಸಿದ ಸರ್ಕಾರ
ಸಣ್ಣ ತೆರಿಗೆದಾರರಿಗೆ ರಿಲೀಫ್ ನೀಡಿದ ಕೇಂದ್ರ ಸರ್ಕಾರ, ಬಾಡಿಗೆ ಮನೆಯಲ್ಲಿರುವ ತೆರಿಗೆದಾರರಿಗೆ ವಿನಾಯ್ತಿ ಹೆಚ್ಚಳ
ವಾರ್ಷಿಕ 5 ಲಕ್ಷಕ್ಕಿಂತ ಕಡಿಮೆ ಆದಾಯವಿದ್ದರೆ 3 ಸಾವಿರ ರೂ ತೆರಿಗೆ ವಿನಾಯ್ತಿ.
ಗ್ರಾಮ ಪಂಚಾಯತಗಳಿಗೆ ಕೇಂದ್ರದಿಮದ ಬರುವ ನೇರ ಅನುದಾನ 80 ಲಕ್ಷಕ್ಕೆ ಏರಿಕೆ
ಪ್ರಧಾನ ಮಂತ್ರಿ ಜನ್ ಔಷಧ್ ಯೋಜನೆ. ನ್ಯಾಷನಲ್ ಡಯಾಲಿಸಸ್ ಯೋಜನೆ.
ಪಶುಗಳಿಗಾಗಿ ನಕುಲ್ ಸ್ವಾಸ್ಥ್ಯ ಯೋಜನೆ.
10 ಸಾರ್ವಜನಿಕ ಮತ್ತು 10 ಖಾಸಗಿ ಶಿಕ್ಷಣ ಸಂಸ್ಥೆಗಳು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಲು 1000ಕೋಟಿ ಅನುದಾನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.