ಭಾರತೀಯ ವಿಜ್ಞಾನಿಗಳು ಜಗತ್ತು ಮೆಚ್ಚುವ ಸಾಧನೆಗಳನ್ನು ಮಾಡುತ್ತಿದ್ದಾರೆ. ಇದೀಗ ‘ಹೆಪಟೈಟಿಸ್ ಸಿ’ ಯನ್ನು ಗುಣಪಡಿಸುವ ಚಿಕಿತ್ಸೆಯನ್ನು ಕಂಡುಹಿಡಿದು ಮಹಾತ್ಕಾರ್ಯ ಮಾಡಿದ್ದಾರೆ.
ಭಾರತದಲ್ಲಿ ಶೇ.15ರಿಂದ20ರಷ್ಟು ಕ್ರೊನಿಕ್ ಲಿವರ್ ಕಾಯಿಲೆ ‘ಹೆಪಟೈಟಿಸ್ ಸಿ’ (ಎಚ್ಸಿವಿ)ವೈರಸ್ನಿಂದಲೇ ಬರುತ್ತದೆ.
ಇದೀಗ ಐಐಎಸ್ಸಿಯ ಪ್ರೋ.ಸುಮಿತ್ರಾ ದಾಸ್ ಮತ್ತು ಅವರ ತಂಡ ನೂತನ ಲಸಿಕೆಯನ್ನು ಕಂಡು ಹಿಡಿದಿದ್ದು, ಪ್ರಿ ಕ್ಲಿನಿಕಲ್ ಟ್ರಯಲ್ನಲ್ಲಿ ಇದು ಉತ್ತಮ ಫಲಿತಾಂಶವನ್ನು ನೀಡುತ್ತಿದೆ.
ಎಚ್ಸಿವಿ ಸೋಂಕಿನ ರಕ್ತದ ಮೂಲಕ ಇನ್ನೊಬ್ಬರಿಗೆ ನೇರವಾಗಿ ಹರಡುತ್ತದೆ. ಮೊದಮೊದಲು ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ, ಆದರೆ ವರ್ಷಗಳು ಉರುಳಿದಂತೆ ತೀವ್ರ ಲಿವರ್ ಸಮಸ್ಯೆಯನ್ನು ಉಂಟು ಮಾಡುತ್ತದೆ. ಕ್ಯಾನ್ಸರ್ ಕೂಡ ಉಂಟಾಗಬಹುದು, ಭಾರತೀಯ ಉಪಖಂಡಗಳಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಂಡಿದೆ.
ಇದೀಗ ಈ ರೋಗದ ವಿರುದ್ಧ ಹೋರಾಡಲು ಲಸಿಕೆಯನ್ನು ಸುಮಿತ್ರಾ ಮತ್ತು ಅವರ ತಂಡ ಕಂಡು ಹಿಡಿದಿರುವುದು ಮಹತ್ವದ ಸಾಧನೆಯಾಗಿದೆ. ಇಂಡೋ-ಆಸ್ಟ್ರೇಲಿಯನ್ ಬಯೋಟೆಕ್ನಾಲಜಿ ಮತ್ತು ಭಾರತ ಸರ್ಕಾರದ ಅನುದಾನದಿಂದ ಈ ಸಂಶೋಧನೆಯನ್ನು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.