ಕೊಚ್ಚಿ: ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ನಡೆದ ದೇಶದ್ರೋಹದ ಪ್ರಕರಣದ ಬಗ್ಗೆ ಮಾಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ತಮ್ಮ ಬ್ಲಾಗ್ನಲ್ಲಿ ಭಾವಾನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರೀಯತೆಯ ಬಗ್ಗೆ ಮಾತನಾಡಿದ ಅವರು, ದೇಶಕ್ಕಾಗಿ ಸೇನೆ ಮತ್ತು ಯೋಧರ ತ್ಯಾಗದ ಬಗ್ಗೆ ಹೇಳಿರುವ ಅವರು ಜೆಎನ್ಯು ವಿವಾದವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ತಮ್ಮ ಬ್ಲಾಗ್ನಲ್ಲಿ ‘ಭಾರತ ಸಾಯುತ್ತಿರುವಾಗ ನಾವು ಬದುಕುವುದು ಏತಕ್ಕೆ’ ಎಂಬ ಶೀರ್ಷಿಕೆ ನೀಡಿರುವ ಅವರು, ಸಿಯಾಚಿನ್ನಲ್ಲಿ ಇತ್ತೀಚಿಗೆ ಮೃತರಾದ 10 ಯೋಧರನ್ನು ಸ್ಮರಿಸಿದ್ದಾರೆ. ಅಲ್ಲದೇ ಹುತಾತ್ಮ ಲಾನ್ಸ್ ನಾಯ್ಕ್ ಸುಧೀಶ್ ಅವರ ಮೃತದೇಹದ ಮುಂದೆ ಅವರ 5 ತಿಂಗಳ ಮಗು ರೋಧಿಸುತ್ತಿರುವ ಚಿತ್ರಣವನ್ನು ನೋಡಿ ತನಗಾದ ವೇದನೆಯನ್ನು ಅವರು ವಿವರಿಸಿದ್ದಾರೆ. ಮನೆಯಲ್ಲಿ ಆರಾಮವಾಗಿ ಕುಳಿತು ಸ್ವಾತಂತ್ರ್ಯ ಮತ್ತು ರಾಷ್ಟ್ರೀಯತೆಯ ಬಗ್ಗೆ ಮಾತನಾಡುವುದು ನಾಚಿಕೆಗೇಡು’ ಎಂದಿದ್ದಾರೆ.
’ಚಳಿಯಾದಾಗ ದಪ್ಪ ಹೊದಿಕೆಯಲ್ಲಿ ನಾವು ಬೆಚ್ಚನೆ ಮಲಗುತ್ತೇವೆ. ಸ್ನಾನ ಮಾಡಲು, ಹಲ್ಲುಜ್ಜಲು ಬಿಸಿ ನೀರಿದೆ. ಈ ಸೌಲಭ್ಯವನ್ನು ಬಳಸಿದ ಬಳಿಕ ನಾವು ವಿಶ್ವವಿದ್ಯಾಲಯಗಳಿಗೆ, ಕಛೇರಿಗಳಿಗೆ ತೆರಳುತ್ತೇವೆ. ಸೈನಿಕರ ಬಗ್ಗೆ ಮಾತನಾಡುತ್ತೇವೆ, ಅವರನ್ನು ಹೀಯಾಳಿಸುತ್ತೇವೆ, ಅವರನ್ನು ಪ್ರಶ್ನಿಸುತ್ತೇವೆ. ನಮ್ಮ ದೇಶದ ಮಣ್ಣಿನ ಮೇಲೆ ನಾವು ನಿಂತಿದ್ದೇವೆ, ನಮ್ಮ ತಲೆ ಮೇಲಿರುವ ಆಕಾಶ, ನಾವು ಉಸಿರಾಡುವ ಗಾಳಿ, ನಾವು ಕುಡಿಯುವ ನೀರು, ಎಲ್ಲಕ್ಕಿಂತಲೂ ಮಿಗಿಲಾಗಿ ಈ ಭೂಮಿಯ ಮಣ್ಣಿನಲ್ಲಿ ನಾವು ಸತ್ತ ಮೇಲೂ ಒಂದಾಗುತ್ತೇವೆ’ ಎಂದು ಬರೆದಿದ್ದಾರೆ.
ನಾನು ದೇಶದಲ್ಲಿ ನಡೆಯುತ್ತಿರುವ ಸದ್ಯದ ಸ್ಥಿತಿಗತಿಗಳ ಬಗ್ಗೆ ಕಾಮೆಂಟ್ ಮಾಡಲು ಹೋಗುವುದಿಲ್ಲ ಎಂದಿರುವ ಅವರು, ದೇಶ ಮತ್ತು ಸ್ವಾತಂತ್ರ್ಯದ ನಿಜವಾದ ಅರ್ಥದ ಬಗ್ಗೆ ತಮ್ಮ ಮಕ್ಕಳಿಗೆ ತಿಳಿಸುವಂತೆ ಪೋಷಕರನ್ನು ಮನವಿ ಮಾಡಿದ್ದಾರೆ. ಸ್ವಾತಂತ್ರ್ಯವನ್ನು ಗೌರವಿಸುವುದು ಎಷ್ಟು ಅಗತ್ಯವೋ, ಅದಕ್ಕಾಗಿ ತೆತ್ತ ಬೆಲೆಯನ್ನೂ ಗೌರವಿಸಬೇಕಾದುದು ಅಷ್ಟೇ ಅಗತ್ಯ.
ಜೆಎನ್ಯು ವಿದ್ಯಾರ್ಥಿಗಳ ಮತಿಹೀನ ಕಾರ್ಯದ ಬಗ್ಗೆ ಅವರು ನೇರ ಟೀಕೆ ಮಾಡದಿದ್ದರೂ ರಾಷ್ಟ್ರ ಪ್ರೇಮದ ಅರ್ಥವನ್ನು, ಅಗತ್ಯವನ್ನು ತಿಳಿದುಕೊಳ್ಳಲು ಅವರು ಬರೆದಿರುವ ವಾಕ್ಯಗಳನ್ನು ಅರ್ಥೈಸಿಕೊಂಡರೆ ಸಾಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.