ಉಡುಪಿ : ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗಾಗಿ ಜಾರಿಗೆ ತಂದಿರುವ ಹೆಲಿ ಟೂರಿಸಂ ಕಾರ್ಯಕ್ರಮದ ಪ್ರಯುಕ್ತ ಫೆಬ್ರವರಿ 20 ಮತ್ತು 21 ರಂದು ಜಿಲ್ಲೆಯ ಆಸಕ್ತರಿಗಾಗಿ ಹೆಲಿಕ್ಯಾಪ್ಟರ್ ಪ್ರಯಾಣದ ಸೌಲಭ್ಯ ಇರುತ್ತದೆ.
ಈ ಹೆಲಿಕ್ಯಾಪ್ಟರ್ ಹಾರಾಟದ ಪ್ರಯೋಜನ ಪಡೆಯಲು ಪ್ರತಿ ವ್ಯಕ್ತಿಗೆ 3000 ರೂ. ಗಳ ದರ ನಿಗಧಿಪಡಿಸಿದ್ದು, ಗರಿಷ್ಟ 6 ಮಂದಿ ಪ್ರಯಾಣಿಕರು ಒಂದು ಬಾರಿ ಪ್ರಯಾಣಿಸಬಹುದಾಗಿದೆ.
ಈ ಹೆಲಿಕ್ಯಾಪ್ಟರ್ ಪ್ರಯಾಣದಲ್ಲಿ ಮಲ್ಪೆಯ ಸುಂದರ ಬೀಚ್, ಸೈಂಟ್ ಮೇರಿಸ್ ದ್ವೀಪದ ವೈಮಾನಿಕ ನೋಟ ಸಾಧ್ಯವಿದೆ. ಪ್ರಯಾಣಕ್ಕಾಗಿ ಆದಿ ಉಡುಪಿಯ ಎನ್.ಸಿ.ಸಿ ಮೈದಾನದಲ್ಲಿ ಬೆಳಗ್ಗೆ 9 ರಿಂದ 3 ರ ವರೆಗೆ ಸ್ಥಳದಲ್ಲೇ ನೊಂದಣಿ ಮಾಡಿಕೊಳ್ಳಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಸುದೇಶ್ ಶೆಟ್ಟಿ , ಮೊ.ಸಂ.9742507270 ರವರನ್ನು ಸಂಪರ್ಕಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.