ಬೆಳ್ತಂಗಡಿ : ಇಂದು ನಡೆಯಲಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ತಾಲೂಕಿನಲ್ಲಿ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದೆ. ಶುಕ್ರವಾರ ಉಜಿರೆ ಎಸ್ಡಿಎಂ ಪಿಯು ಕಾಲೇಜಿನಲ್ಲಿ ಮತಯಂತ್ರ ಮತ್ತು ಮತದಾನಕ್ಕೆ ಬೇಕಾದ ಪರಿಕರಗಳನ್ನು ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಲಾಯಿತು.
ತಾಲೂಕಿನಲ್ಲಿ 231 ಮತದಾನ ಕೇಂದ್ರಗಳಿನ್ನು ತೆರೆಯಲಾಗಿದೆ. 46 ಸೂಕ್ಷ್ಮ, 72 ಅತೀಸೂಕ್ಷ್ಮ ಹಾಗೂ 110 ಸಾಮಾನ್ಯ ಮತದಾನ ಕೇಂದ್ರಗಳಿದೆ. 45 ನಕ್ಸಲ್ ಸಕ್ರಿಯ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಆ ಬೂತ್ಗಳಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ. ಮತದಾನ ಪ್ರಕ್ರಿಯೆಯಲ್ಲಿ 1270 ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ. ಮತಗಟ್ಟೆಗಳ ಮೇಲುಸ್ತುವಾರಿಗೆ ಓರ್ವ ನೋಡೆಲ್ ಅಕಾರಿಯನ್ನು ನೇಮಿಸಲಾಗಿದ್ದು, ಪ್ರತೀ ತಾಲೂಕು ಪಂಚಾಯತ್ ಕ್ಷೇತ್ರಕ್ಕೊಂದರಂತೆ 26 ಮಂದಿಯನ್ನು ಸೆಕ್ಷರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈಗಾಗಲೇ ಸೆಕ್ಟರ್ ಅಧಿಕಾರಿಗಳು ಮತಗಟ್ಟೆಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಬೆಳ್ತಂಗಡಿ ತಾಲೂಕಿನಲ್ಲಿ 203174 ಮತದಾರರಿದ್ದಾರೆ. ಮತದಾನದ ಸಂದರ್ಭದಲ್ಲಿ ಮೊದಲುಜಿಲ್ಲಾ ಪಂಚಾಯತ್ ಮತದಾನವನ್ನು ಮಾಡಿ ಬಳಿಕ ತಾಲೂಕು ಪಂಚಾಯತ್ಗೆ ಮತದಾನ ಮಾಡಲು ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತೀ ಮತದಾನಕೇಂದ್ರಕ್ಕೆ 5 ಮಂದಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಮತದಾನ ಬೆಳಗ್ಗೆ ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮತಗಟ್ಟೆ ಅಧಿಕಾರಿಗಳಿಗೆ ಹಾಗು ಸಿಬಂದಿಗಳಿಗೆ ಪೂರಕ ಮಾಹಿತಿಯನ್ನು ನೀಡಲಾಯಿತು. ಬಳಿಕ ಆಯಾಯ ಮತಗಟ್ಟೆಗಳಿಗೆ ವಿತರಿಸಿದ ಮತಯಂತ್ರ ಹಾಗೂ ಇತರಪರಿಕರಗಳನ್ನು ಪಡೆದು ತೆರಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.