ನ್ಯೂಯಾರ್ಕ್: ಗೂಗಲ್ನ ಸಾಫ್ಟ್ವೇರ್ ಎಂಜಿನಿಯರ್ ಮ್ಯಾಕ್ಸ್ ಬ್ರೌನ್ ಆಂಡ್ರಾಯ್ಡ್ ಚಾಲಿತ ಬಾತ್ರೂಮ್ ಮಿರರ್ ನಿರ್ಮಿಸಿದ್ದಾರೆ.
ಹೊಸದಾಗಿ ವಿನ್ಯಾಸಗೊಳಿಸಲಾಗಿರುವ ಈ ಸ್ಮಾರ್ಟ್ ಆಂಡ್ರಾಯ್ಡ್ ಚಾಲಿತ ಮಿರರ್ ಅಟೋಮ್ಯಾಟಿಕ್ ಆಗಿ ದಿನಾಂಕ, ಸಮಯ ಮತ್ತು ಹವಾಮಾನವನ್ನು ತೋರಿಸುತ್ತದೆ. ಅಲ್ಲದೇ ಈ ಮಿರರ್ ಗೂಗಲ್ನಲ್ಲಿ ವಾಯ್ಸ್ ಸರ್ಚ್ ಮಾಡಲು ಸಹಕರಿಸುತ್ತದೆ ಎಂದು ಟೆಕ್ಟೈಮ್ಸ್.ಕಾಂ ವರದಿ ಮಾಡಿದೆ.
ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪೆನಿಯ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಮ್ಯಾಕ್ಸ್ ಎರಡು ದಿಕ್ಕುಗಳಲ್ಲೂ ಬಳಸಬಹುದಾದ (two-way mirror) ಕನ್ನಡಿಯ ಸಹಾಯದಿಂದ ಕಂಟ್ರೋಲರ್ ಬೋರ್ಡ್, ಡಿಸ್ಪ್ಲೆ ಪ್ಯಾನೆಲ್, ವಿವಿಧ ಉಪಕರಣಗಳು ಮತ್ತು ಸಪ್ಲೈ ಉಪಕರಣಗಳ ಸಹಾಯದಿಂದ ಕಾರ್ಯಾಚರಿಸುವ ಈ ಮಿರರ್ನ್ನು Google Now Mirror ಅನ್ನು ಹೊಸ ಮಾದರಿಯಾಗಿ ಪರಿಗಣಿಸಬಹುದಾಗಿದೆ ಎಂದು ಅದು ತಿಳಿಸಿದೆ.
ಈ ಮಿರರ್ನ ಬಿಡಿ ಭಾಗಗಳು ಸುಲಭವಾಗಿ ದೊರಕಿದ್ದು ಇದಕ್ಕೆ ಟ್ರಾಫಿಕ್ ಅಪ್ಡೇಟ್, ರಿಮೈಂಡರ್ ಸೇರಿದಂತೆ ಇನ್ನಷ್ಟು ವೈಶಿಷ್ಟ್ಯಪೂರ್ಣವಾಗಿ ಮಾಡುವ ಯೋಜನೆ ಇದೆ ಎಂದು ಮ್ಯಾಕ್ಸ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.