ಬರ್ಲಿನ್: ಭಾಷೆಯಿಂದ ಅಲುಗಾಡುವಷ್ಟು ಭಾರತದ ಜಾತ್ಯಾತೀತತೆ ದುರ್ಬಲವಾಗಿಲ್ಲ, ಈ ಬಗ್ಗೆ ಆತ್ಮವಿಶ್ವಾಸವನ್ನು ಹೊಂದುವ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ.
ಬರ್ಲಿನ್ ನಲ್ಲಿ ಭಾರತದ ರಾಯಭಾರಿ ಸೋಮವಾರ ರಾತ್ರಿ ಆಯೋಜಿಸಿದ್ದ ಸತ್ಕಾರಕೂಟದಲ್ಲಿ ಭಾರತೀಯರನ್ನುದ್ದೇಶಿಸಿ ಅವರು ಮಾತನಾಡಿದರು.
‘ಹಿಂದಿನ ದಿನಗಳಲ್ಲಿ ಜರ್ಮನ್ ನ ರೇಡಿಯೋಗಳಲ್ಲಿ ಸುದ್ದಿಗಳ ಮುಖ್ಯಾಂಶಗಳನ್ನು ಸಂಸ್ಕೃತದಲ್ಲಿ ನೀಡಲಾಗುತ್ತಿತ್ತು. ಭಾರತದಲ್ಲಿ ಸಂಸ್ಕೃತ ಭಾಷೆಯಲ್ಲಿ ಯಾವುದೇ ಸುದ್ದಿಗಳನ್ನು ನೀಡುತ್ತಿರಲಿಲ್ಲ. ಈ ಒಂದು ಕಾರಣದಿಂದ ಜ್ಯಾತ್ಯಾತೀತೆಯು ಅಪಾಯದ ಅಂಚಿನಲ್ಲಿದೆ ಎಂದು ಭಾವಿಸಲಾಗುತ್ತಿತ್ತು. ಆದರೂ ಯಾರಿಂದಲೂ ಅದನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ’ ಎಂದರು.
ನಮ್ಮ ಜಾತ್ಯಾತೀತತೆ ದುರ್ಬಲವಾಗಿಲ್ಲ, ಈ ಬಗ್ಗೆ ನಮಗೆ ಆತ್ಮವಿಶ್ವಾಸವಿದೆ. ಆತ್ಮವಿಶ್ವಾಸ ಮಾತ್ರ ಎಂದಿಗೂ ಅಲುಗಾಡಬಾರದು ಎಂದು ಅವರು ಪ್ರತಿಪಾದಿಸಿದರು.
ಕೇಂದ್ರೀಯ ವಿದ್ಯಾಲಯಗಳಲ್ಲಿ ಜರ್ಮನ್ ಬದಲಾಗಿ ಸಂಸ್ಕೃತ ಭಾಷೆಯನ್ನು ಕಲಿಸುವ ವಿವಾದದ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.