ಸಾನ್ ಫ್ರಾನ್ಸಿಸ್ಕೊ: ಅಲ್ಫಾಬೆಟ್ ಇಂಕ್ ವಿಶ್ವದ ಅತ್ಯಂತ ಬೆಲೆಬಾಳುವ ಕಂಪೆನಿಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ.
ಗೂಗಲ್ನ ಹೊಸ ಪೋಷಕ ಕಂಪೆನಿಯಾಗಿರುವ ಅಲ್ಫಾಬೆಟ್ ಇಂಕ್ ಡಿಜಿಟಲ್ ಜಾಹೀರಾತು ಮಾರುಕಟ್ಟೆಯಲ್ಲಿ ದೃಢವಾದ ವಿಸ್ತೃತ ಬೆಳವಣಿಗೆಯೊಂದಿಗೆ ನಾಲ್ಕನೇ ತ್ರೈಮಾಸಿಕದಲ್ಲಿ ತನ್ನ ಗಳಿಕೆಯ ವರದಿ ಬಿಡುಗಡೆ ಮಾಡಿದ ಬಳಿಕ ಈ ಪರಿವರ್ತನೆ ಕಂಡಿದೆ. ಏತನ್ಮಧ್ಯೆ ಆ್ಯಪಲ್ ಇಂಕ್ನ ಐಫೋನ್ ಕಳೆದ ೮ ವರ್ಷಗಳಲ್ಲೇ ಮೊದಲ ಬಾರಿ ಕುಸಿತ ಕಂಡಿದೆ.
ಅಲ್ಫಾಬೆಟ್ ಇಂಕ್ 4.9 ಬಿಲಿಯನ್ ಆದಾಯದೊಂದಿಗೆ ತನ್ನ ತ್ರೈಮಾಸಿಕದಲ್ಲಿ 21.3 ಮಿಲಿಯನ್ ಸಂಪಾದಿಸಿದೆ. ರೆಗ್ಯೂಲೇಟರಿ ಫೈಲಿಂಗ್ ಆಧಾರದಲ್ಲಿ ಅಲ್ಫಾಬೆಟ್ ಇಂಕ್ನ ಮಾರುಕಟ್ಟೆ ಮೌಲ್ಯ 555 ಬಿಲಿಯನ್ ಡಾಲರ್ ಕಂಡು ಬಂದಿದ್ದು, ಈ ವೇಳೆ ಆ್ಯಪಲ್ ಇಂಕ್ನ ಮಾರುಕಟ್ಟೆ ಮೌಲ್ಯ 553 ಬಿಲಿಯನ್ ಡಾಲರ್ ತಲುಪಿದೆ.
ನಾಲ್ಕನೇ ತ್ರೈಮಾಸಿಕದಲ್ಲಿ ಗೂಗಲ್ 6.8 ಬಿಲಿಯನ್ ನಿರ್ವಹಣಾ ಲಾಭದೊಂದಿಗೆ 17.1 ಮಿಲಿಯನ್ ಆದಾಯ ಸಂಪಾದಿಸಿದೆ. ಇದರಿಂದ ಗೂಗಲ್ ಪ್ರಸಕ್ತ ತ್ರೈಮಾಸಿಕದಲ್ಲಿ ಶೇ.40ರಷ್ಟು ಲಾಭ ಪಡೆದಿದ್ದರೆ ಆ್ಯಪಲ್ ಶೇ.32ರಷ್ಟು ಲಾಭ ಪೆಡೆದುಕೊಂಡಿದೆ .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.