ನವದೆಹಲಿ: ತಮ್ಮ ಅನುಚಿತ ವರ್ತನೆಗೆ ಪಾಕಿಸ್ಥಾನಿ ಆಟಗಾರರು ಕ್ಷಮೆ ಕೇಳದ ವಿನಃ ಅವರೊಂದಿಗೆ ಆಟ ಆಡುವ ಮಾತೇ ಇಲ್ಲ ಎಂದು ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ಹೇಳಿದ್ದಾರೆ.
2014ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ನಲ್ಲಿ ಭಾರತವನ್ನು ಸೋಲಿಸಿದ ಪಾಕ್ ಹಾಕಿ ಆಟಗಾರರು ಶರ್ಟ್ ಬಿಚ್ಚಿ, ಅಸಭ್ಯ ಸಂಕೇತಗಳ ಮೂಲಕ ಅನುಚಿತವಾಗಿ ವರ್ತಿಸಿದ್ದರು. ಇದಕ್ಕೆ ಕ್ಷಮೆ ಕೇಳಬೇಕೆಂದು ಭಾರತ ಆಗ್ರಹಿಸಿತ್ತು. ಆದರೆ ಇದುವರೆಗೆ ಕ್ಷಮಾಪಣೆ ಬಂದಿಲ್ಲ.
ಹೀಗಾಗಿ ಕ್ಷಮೆ ಕೇಳುವವರೆಗೂ ಅವರೊಂದಿಗೆ ಆಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸರ್ದಾರ್ ಹೇಳಿದ್ದಾರೆ. ಅಲ್ಲದೇ ಹಾಕಿ ಇಂಡಿಯಾ ಲೀಗ್ನಲ್ಲೂ ಯಾವುದೇ ಪಾಕಿಸ್ಥಾನಿ ಆಟಗಾರರಿಗೆ ಅವಕಾಶ ನೀಡಲಾಗುತ್ತಿಲ್ಲ.
ಆಟಗಾರರು ಏಕತೆ ಸಂದೇಶಕರಾಗಿರಬೇಕು, ಗೆದ್ದಾಗ ಸಂಭ್ರಮಿಸುವುದು ಸಾಮಾನ್ಯ, ಆದರೆ ಅದು ಗೌರವಯುತವಾಗಿರಬೇಕು. ಭಾರತ ಮತ್ತು ಪಾಕಿಸ್ಥಾನ ಕ್ರೀಡೆಯ ಮೂಲಕ ಹತ್ತಿರವಾಗಲು ಪ್ರಯತ್ನಿಸುತ್ತಿದೆ. ಇದನ್ನು ಪಾಕ್ ಆಟಗಾರರು ಅರ್ಥೈಸಿಕೊಳ್ಳಬೇಕು. ಅವರ ವರ್ತನೆ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದುದು ಎಂದು ಸರ್ದಾರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.