ನವದೆಹಲಿ: ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲಿ ನಿಸ್ಸೀಮರಾದ ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್ ಇದೀಗ ಮತ್ತೊಂದು ಹಾಸ್ಯಾಸ್ಪದ ಹೇಳಿಕೆಯನ್ನು ನೀಡಿದ್ದಾರೆ. ಅದು ಕೂಡ ಕುಟುಂಬ ಯೋಜನೆಯ ಬಗೆಗೆ.
’ದೇಶದ ಜನಸಂಖ್ಯೆಯನ್ನು ನಿಯಂತ್ರಿಸಲು ಕಠಿಣ ಕುಟುಂಬ ಯೋಜನೆ ಕಾನೂನನ್ನು ತರಬೇಕು. ಯಾರು ಕುಟುಂಬಯ ಯೋಜನೆಗೆ ಒಳಪಡುವುದಿಲ್ಲವೋ ಅವರನ್ನು ಮತದಾನದ ಹಕ್ಕಿನಿಂದ ವಂಚಿತಗೊಳಿಸಬೇಕು. ಹಿಂದೂಗಳು ಸಂತಾನಹರಣ ಶಸ್ತ್ರಚಿಕಿತ್ಸಗೆ ಒಳಪಟ್ಟಂತೆ ಮುಸ್ಲಿಮರೂ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಬೇಕು. ಎಲ್ಲರಿಗೂ ಸಮಾನ ಕಾನೂನುಗಳಿರಬೇಕು. ನಮ್ಮ ಆಡಳಿತದಲ್ಲಿ ಯಾರ ಓಲೈಕೆಯೂ ಇಲ್ಲ’ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
‘ನಾನು ನಾಲ್ಕು ಮಕ್ಕಳನ್ನು ಹೊಂದಿ ಎಂದು ಕರೆಕೊಟ್ಟಾಗ ಎಲ್ಲರೂ ಬೊಬ್ಬೆ ಹೊಡೆದರು. ಆದರೆ ಅವರು ನಾಲ್ಕು ಹೆಂಡತಿಯರನ್ನು ಹೊಂದಿ 40 ಮಕ್ಕಳನ್ನು ಹೆರುವಾಗ ಯಾರೊಬ್ಬರೂ ಮಾತನಾಡುವುದಿಲ್ಲ. ಸ್ವಾತಂತ್ರ್ಯದ ಸಂದರ್ಭ ನಮ್ಮ ಜನಸಂಖ್ಯೆ 30 ಕೋಟಿ ಇತ್ತು, ಈಗ 130 ಕೋಟಿಯಾಗಿದೆ. ಇದಕ್ಕೆ ಯಾರು ಜವಾಬ್ದಾರರು? ಹಿಂದೂ, ಮುಸ್ಲಿಂ, ಕ್ರೈಸ್ಥ, ಸಿಖ್ ಎಲ್ಲರಿಗೂ ಸಮಾನ ಕಾನೂನುಗಳಿರಬೇಕು’ ಎಂದಿದ್ದಾರೆ.
ಮುಸ್ಲಿಮರನ್ನು ಮತದಾನದ ಹಕ್ಕಿನಿಂದ ವಂಚಿತಗೊಳಿಸಬೇಕು ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡು ಸಾಕ್ಷಿ ಮಹಾರಾಜ್ ಈ ಹೇಳಿಕೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.