ಜನವರಿ 16, 17 ರಂದು ಪಣಂಬೂರು ಬೀಚಿನಲ್ಲಿ ಮಧುಬನ್ ಇವೆಂಟ್ಸ್ ಪ್ರಸ್ತುತ ಪಡಿಸಲಿದೆ ‘ಎಬಿಸಿಡಿ-2016’ ಎನಿಬಡಿ ಕ್ಯಾನ್ ಡೂ! ಜಸ್ಟ್ ಎಂಟರ್ಟೇನ್ಮೆಂಟ್ ಕೆ ಲಿಯೇ
ಮಂಗಳೂರು : ಮಂಗಳೂರಿನ ಪಣಂಬೂರು ಬೀಚಿನಲ್ಲಿ ಜನವರಿ 16 ಹಾಗೂ 17 ರಂದು ನಡೆಯಲಿರುವ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಂಗವಾಗಿ ಮಧುಬನ್ ಇವೆಂಟ್ಸ್ ಸಂಸ್ಥೆಯು “ಎಬಿಸಿಡಿ-2016” ಎನಿಬಡಿ ಕ್ಯಾನ್ ಡೂ! ಜಸ್ಟ್ ಎಂಟರ್ಟೇನ್ಮೆಂಟ್ ಕೆ ಲಿಯೇ ಎನಿಬಡಿ ಕ್ಯಾನ್ ಪರ್ಫಾಮ್ ಎಂಬ ಅದ್ಭುತ ಹಾಗೂ ಅತ್ಯಾಕರ್ಷಕ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ಎರಡೂ ದಿನಗಳಂದು ಸಂಜೆ 6.30 ರಿಂದ ಪ್ರಾರಂಭವಾಗುವುದು. ಟೀಂ ಮಂಗಳೂರು ಹಾಗೂ ರೋಟರಿ ಅಂತರಾಷ್ಟ್ರೀಯ ಜಿಲ್ಲೆ-3180 ವಲಯ-4 ಇವರು ಗಾಳಿಪಟ ಉತ್ಸವದ ಆಯೋಜಕರಾಗಿದ್ದಾರೆ.
ಎಬಿಸಿಡಿ-2016 ಎಂಬ ವಿಶಿಷ್ಟ ಮನರಂಜನಾ ಕಾರ್ಯಕ್ರಮದಲ್ಲಿ ಯಾರು ಕೂಡ ಭಾಗವಹಿಸಬಹುದಾಗಿದ್ದು, ಯಾವುದೇ ವಯೋಮಿತಿಯಿಲ್ಲ. ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರದರ್ಶನ ನೀಡುವ ಅವಕಾಶವನ್ನೊದಗಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಭಾಗವಹಿಸುವವರ ಒಟ್ಟು ಸಂಖ್ಯೆಯನ್ನು ಆಧರಿಸಿ ಪ್ರತಿಯೊಬ್ಬರಿಗೂ ಪ್ರದರ್ಶನ ನೀಡಲು ನಿರ್ದಿಷ್ಟ ಸಮಯಾವಕಾಶ ಒದಗಿಸಲಾಗುವುದು. ಈ ಎರಡೂ ದಿನಗಳಲ್ಲಿ ವೃತ್ತಿಪರ ಕಲಾವಿದರಿಗೂ ವಿಶೇಷ ಹಾಡು ಹಾಗೂ ನೃತ್ಯ ಕಾರ್ಯಕ್ರಮ ನೀಡಲು ಮಧುಬನ್ ಇವೆಂಟ್ಸ್ ಅವಕಾಶ ನೀಡಲಿದೆ.
ಗಾಯನ (ಎಲ್ಲರಿಗೂ ಪ್ರವೇಶಾವಕಾಶ): ಭಾಗವಹಿಸುವವರು ವೈಯಕ್ತಿಕ ಅಥವಾ ಗುಂಪು ವಿಭಾಗದಲ್ಲಿ ವೇದಿಕೆಯಲ್ಲಿ ಹಾಡಲು ಅವಕಾಶವಿದೆ. ಆಯೋಜಕರ ಬ್ಯಾಂಡನ್ನು ಉಪಯೋಗಿಸಬಹುದು (ಆದರೆ ಮೈನಸ್ ಟ್ರ್ಯಾಕುಗಳನ್ನು ಹಾಡುಗಾರರೇ ಒದಗಿಸಬೇಕು).
ನೃತ್ಯ ಹಾಗೂ ವೈವಿಧ್ಯಮಯ ಶೋ (ಎಲ್ಲರಿಗೂ ಪ್ರವೇಶಾವಕಾಶ): ಭಾಗವಹಿಸುವವರು ಯಕ್ಷಗಾನ, ಭರತನಾಟ್ಯಂ, ಕಥಕ್ಕಳಿ, ದಫ್, ಒಪ್ಪಣೆ, ಖವ್ವಾಲಿ, ದಾಂಡಿಯಾ, ಹುಲಿ ನೃತ್ಯ ಅಥವಾ ಯಾವುದೇ ವಿಧದ ನೃತ್ಯವನ್ನು ವೈಯಕ್ತಿಕ ಹಾಗೂ ಗುಂಪು ವಿಭಾಗದಲ್ಲಿ ಪ್ರದರ್ಶಿಸಬಹುದು. ಮೈಮ್, ಮಿಮಿಕ್ರಿ, ಸೌಂಡ್ ಮ್ಯಾಜಿಕ್ ಕಲಾವಿದರು, ಬೀಟ್ ಬಾಕ್ಸರುಗಳು, ಡಿಜೆ ಕಲಾವಿದರು ಹಾಗೂ ಇನ್ನಿತರ ಪ್ರತಿಭಾವಂತರು ಕೂಡ ಭಾಗವಹಿಸುವ ಅವಕಾಶವಿದೆ (ನೃತ್ಯ ಪಟುಗಳೇ ಟ್ರ್ಯಾಕ್ ಒದಗಿಸಬೇಕು).
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲಾ ಕಲಾವಿದರಿಗೂ ಸ್ಮರಣಿಕೆಗಳು, ಸರ್ಟಿಫಿಕೇಟುಗಳನ್ನು ನೀಡಲಾಗುವುದು.
ಭಾಗವಹಿಸುವ ಎಲ್ಲಾ ಕಲಾವಿದರಿಗೆ ಹಾಗೂ ಪ್ರೇಕ್ಷಕರಿಗೆ ಸ್ಪೂರ್ತಿ ನೀಡಲು ಈ ಎರಡೂ ದಿನಗಳ ಮನರಂಜನಾ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿ ಡೈಜಿವರ್ಲ್ಡ್ 24×7 ಸುದ್ದಿ ಹಾಗೂ ಮನರಂಜನಾ ಚಾನೆಲ್ನಲ್ಲಿ ವಿವಿಧ ಸಂಚಿಕೆಗಳಲ್ಲಿ ಪ್ರಸಾರ ಮಾಡಲಾಗುವುದು.
ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಬಹುದು : +91 96115 86293 / +91 96115 86302 / +91 98442 66053.
ಫ್ಲ್ಯಾಶ್ ಮೋಬ್ (Flash Mob): ಜನವರಿ 17, ಭಾನುವಾರದಂದು ಈ ವಿಶಿಷ್ಟ ಕಾರ್ಯಕ್ರಮವು ‘ಫ್ಲ್ಯಾಶ್ ಮೋಬ್’ ಎಂಬ ಪರಿಪೂರ್ಣ ಮನರಂಜನಾತ್ಮಕ ಶೋದಿಂದ ಆರಂಭವಾಗಲಿರುವುದು. ಈ ಕಾರ್ಯಕ್ರಮದ ಭಾಗವಾಗಿ ಅಲ್ಲಿ ನೆರೆದಿರುವ ಜನಸ್ತೋಮಕ್ಕೆ ಆಶ್ಚರ್ಯವಾಗುವಂತೆ, ಅವರ ನಡುವೆಯೇ ಇರುವ ಕೆಲವು ಕಲಾವಿದರು ಒಮ್ಮೆಗೇ ಹಾಡಲು, ಕುಣಿಯಲು, ಹುಲಿ ವೇಷ, ವಿವಿಧ ರೀತಿಯ ಗೊಂಬೆಗಳು ಹಾಗೂ ಇನ್ನಿತರ ಕಲೆಗಳನ್ನು 3 ಲಕ್ಷ ಪ್ರೇಕ್ಷಕರ ನಡುವೆಯೇ ಆಶ್ಚರ್ಯಕರ ರೀತಿಯಲ್ಲಿ ಗೋಚರಿಸುವುದು. ವಿವಿಧ ಕಲಾವಿದರು ಬೇರೆ ಬೇರೆ ಸ್ಥಳಗಳಲ್ಲಿ ವಿವಿಧ ರೀತಿಯ ಕಲೆಗಳನ್ನು ಅಭಿನಯಿಸಿ ಜನರನ್ನು ರಂಜಿಸಿ, ಪ್ರೇಕ್ಷಕರನ್ನೂ ಕೂಡ ಹೆಜ್ಜೆ ಹಾಕುವಂತೆ ಮಾಡಿ ತಾವೂ ನಕ್ಕು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿ ಬಿಡಲಿದ್ದಾರೆ.
ಗಾಳಿಪಟ ಉತ್ಸವ: ನಗರದ ಹವ್ಯಾಸಿ ಗಾಳಿಪಟ ಹಾರಾಟಗಾರರ ಸಂಸ್ಥೆಯಾದ ಟೀಂ ಮಂಗಳೂರು ತನ್ನ ವೈವಿಧ್ಯಮಯ ಹಾಗೂ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಗಾಳಿಪಟಗಳನ್ನು ಹಾರಿಸಿ ತನ್ನ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದೆ. ಪಣಂಬೂರು ಬೀಚಿನಲ್ಲಿ ಜನವರಿ 16 ಹಾಗೂ 17 ರಂದು ಮಧ್ಯಾಹ್ನ 2.30 ರಿಂದ ನಡೆಯಲಿರುವ ಈ ಉತ್ಸವವನ್ನು ಟೀಂ ಮಂಗಳೂರು ರೋಟರಿ ಅಂತರಾಷ್ಟ್ರೀಯ ಜಿಲ್ಲೆ-3180 ವಲಯ-4ರ ಸಹಯೋಗದೊಂದಿಗೆ ಆಯೋಜಿಸಲಿದೆ. “ಒನ್ ಸ್ಕೈ, ಒನ್ ಅರ್ತ್, ಒನ್ ಫ್ಯಾಮಿಲಿ’ ಈ ವರ್ಷದ ಉತ್ಸವದ ಥೀಮ್ ಆಗಿದೆ.
ಸುಮಾರು 3 ಲಕ್ಷ ಜನರು ಈ ಎರಡು ದಿನಗಳ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು ಫ್ರಾನ್ಸ್, ಆಸ್ಟ್ರೇಲಿಯಾ, ಜರ್ಮನಿ, ಹಾಲ್ಲೆಂಡ್, ಬ್ರಿಟನ್ ದೇಶಗಳ 25 ಅಂತರಾಷ್ಟ್ರೀಯ ಗಾಳಿಪಟ ಹಾರಾಟ ಕ್ಲಬ್ಬುಗಳು ಹಾಗೂ 20 ರಾಷ್ಟ್ರೀಯ ಗಾಳಿಪಟ ಕ್ಲಬ್ಬುಗಳ 250 ಗಾಳಿಪಟ ಹಾರಾಟಗಾರರು ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.