ಟೋಕಿಯೋ: ಒಬ್ಬಳು ಶಾಲಾ ಬಾಲಕಿಗಾಗಿ ಒಂದು ರೈಲ್ವೇ ಸ್ಟೇಶನನ್ನು ನಡೆಸುತ್ತಿದೆ ಜಪಾನ್ ರೈಲ್ವೇ. ಈ ಮೂಲಕ ತನ್ನ ದೇಶದ ಓರ್ವಳ ವಿದ್ಯಾಭ್ಯಾಸವೂ ತನಗೆ ಅತಿ ಮುಖ್ಯ ಎನ್ನುವುದನ್ನು ತೋರಿಸಿಕೊಟ್ಟಿದೆ.
ಜಪಾನಿನ ಉತ್ತರ ಐಸ್ಲ್ಯಾಂಡ್ನ ಹೊಕ್ಕೈಡೋನಲ್ಲಿರುವ ಕಾಮಿ-ಶಿರತಕಿ ರೈಲ್ವೇ ಸ್ಟೇಶನ್ ಪ್ರಯಾಣಿಕರಿಲ್ಲದ ಕಾರಣ ಕಾರ್ಯವನ್ನು ಸ್ಥಗಿತಗೊಳಿಸಬೇಕಿತ್ತು.
ಆದರೆ ಆ ರೈಲ್ವೇ ಸ್ಟೇಶನ್ನಿಗೆ ಒಬ್ಬಳೇ ಒಬ್ಬಳು ಪ್ರಯಾಣಿಕಳಾದ ಹೈಸ್ಕೂಲ್ ವಿದ್ಯಾರ್ಥಿನಿಗಾಗಿ ರೈಲ್ವೇ ಇಲಾಖೆ ದಿನಕ್ಕೆರಡು ಬಾರಿ ಇಲ್ಲಿ ರೈಲು ಸಂಚಾರ ಮಾಡುತ್ತದೆ.
ಆಕೆಯನ್ನು ಇಲ್ಲಿ ಹತ್ತಿಸಿ, ಇಳಿಸುವ ಕಾರ್ಯವನ್ನು ಮಾಡುತ್ತದೆ. ಆಕೆ ಪದವಿ ಮುಗಿಸುವವರೆಗೂ ಈ ಕಾರ್ಯವನ್ನು ಮಾಡುವುದಾಗಿ ರೈಲ್ವೇ ಘೋಷಿಸಿದೆ.
ಜಪಾನ್ ರೈಲ್ವೇಯ ಈ ಕಾರ್ಯವನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.