ಒಂದು ಧರ್ಮದ ಬಗ್ಗೆ ಹಿಯ್ಯಾಳಿಸಿ ಮಾತನಾಡುವಾಗ ಧರ್ಮದ ಅರ್ಥವನ್ನು ಸರಿಯಾಗಿ ತಿಳಿದುಕೊಳ್ಳುವುದು ಅವಶ್ಯಕ. ಧರ್ಮ ಎಂದರೆ ಯಾವತ್ತು ಯಾವ ಕಾಲಕ್ಕೂ ಜಗದ ಜನರ ಒಳಿತನ್ನೆ ಬಯಸುವುದು ಮತ್ತು ಒಳ್ಳೆಯದನ್ನೇ ಮಾಡುವುದಾಗಿದೆ ಅದಕ್ಕೇನೆ ‘ವಸುದೈವ ಕುಟುಂಬಕಂ’ “ಸರ್ವೇ ಜನ ಸುಖಿನೋ ಭವಂತುಃ” ಎಂದು ಹೇಳಿರುವುದಷ್ಟೇ ಅಲ್ಲ, ಈ ದೇಶದಲ್ಲಿ ಅದರ ಆಚರಣೆಯು ಇಂದಿಗೂ ನಡೆಯುತ್ತಿದೆ.
ಇನ್ನೊಂದು ಧರ್ಮವನ್ನು ದೂಷಿಸಿ ನನ್ನ ಮತವೇ ಶ್ರೇಷ್ಠ. ಜಗತ್ತಿನ ಜನರೆಲ್ಲ ನನ್ನ ಮತವನ್ನೇ ಅನುಸರಿಸಬೇಕು ಎಂದು ಅಹಂಕಾರದಿಂದ ಮಾತನಾಡುವುದು. ಆಮಿಷ ಒಡ್ಡುವುದು, ಸೌಲಭ್ಯ- ಸವಲತ್ತುಗಳನ್ನು ನೀಡುವ ನೆಪದಲ್ಲಿ ಮತಾಂತರಿಸುವುದು ಕೂಡ ಧರ್ಮದ ಪರಿಧಿಯಿಂದ ಹೊರಗುಳಿದಂತೆ. ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮವನ್ನು ಟೀಕಿಸುವುದನ್ನು ಕೆಲ ವಿಚಾರವಾದಿಗಳು ಸಾಧನೆ ಎಂಬಂತೆ ಬಿಂಬಿಸುತ್ತಿದ್ದಾರೆ.
ಕೆಲವು ಮೂಢನಂಬಿಕೆ ಮತ್ತು ಅಸಂಪ್ರದಾಯಿಕ ಆಚರಣೆಗಳು ಕೇವಲ ಹಿಂದೂ ಧರ್ಮದಲ್ಲಿ ಮಾತ್ರವಲ್ಲದೇ ಎಲ್ಲ ಮತಗಳಲ್ಲಿಯೂ ಇವೆ. ಎಲ್ಲರ ಮನೆಯ ದೋಸೆ ತೂತು ಎಂಬ ಒಗಟನ್ನು ಅರ್ಥೈಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಹಾಗೇನೇ “ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದ…” ಎಂಬಂತೆ ಅಜ್ಞಾನ, ಅಲ್ಪ ಜ್ಞಾನದಿಂದ ಆವೇಶಕ್ಕೊಳಗಾಗಿ ಅಥವಾ ಇನ್ನಾರದೋ ಸಿಂಪಥಿಯನ್ನು ಗಳಿಸಿಕೊಳ್ಳುವುದಕ್ಕಾಗಿ ಇನ್ನೊಂದು ಧರ್ಮದ ಆಚರಣೆಗಳ ಬಗ್ಗೆ ಅವಹೇಳನ ಮಾಡದೆ. ಆಳವಾಗಿ ತಿಳಿದು ಸಾರ್ವಜನಿಕವಾಗಿ ಮಾತನಾಡುವುದು ಒಳ್ಳೆಯದು.
ಲೇಖಕ : ಶಿವು ನರೂಟಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.