ಜೈನ ಧರ್ಮವು ಅಹಿಂಸೆಯನ್ನು ಸಾರುವ ಭಾರತೀಯ ಧರ್ಮವಾಗಿದೆ. ಜೀವನದಲ್ಲಿ ಆಧ್ಯಾತ್ಮಿಕವಾಗಿ ಪರಸ್ಪರ ಅವಲಂಬನೆ, ಸಮಾನತೆಯ ಮಹತ್ವವನ್ನು ಸೂಚಿಸುತ್ತದೆ. ಅಹಿಂಸೆ ಮತ್ತು ಸ್ವನಿಯಂತ್ರಣದಿಂದ ವಿಮೋಚನೆಯನ್ನು ಪಡೆಯಬಹುದು ಎಂದು ಪ್ರತಿಪಾಲಕರು ನಂಬಿದ್ದಾರೆ. ವೈರಾಗ್ಯವು ಜೈನರ ನಂಬಿಕೆಯ ಪ್ರಮುಖ ಕೇಂದ್ರಬಿಂದುವಾಗಿದೆ. ಜೈನ ಧರ್ಮದ ಮೂರು ಪ್ರಮುಖ ತತ್ವಗಳೆಂದರೆ ಅಹಿಂಸೆ, ಅನೇಕಾಂತವಾದ ಮತ್ತು ಅಪರಿಗ್ರಹ.
ಜಗತ್ತಿನ ಎಲ್ಲಾ ಜೀವಿಗಳು ಸಮಾನವೆಂದು ನಂಬಿರುವ ಓರ್ವ ಜೈನ ಸಾಧು ಗೋಹತ್ಯೆ ತಡೆಗೆ ಅಮರಣಾಂತ ಉಪವಾಸ ಕೈಗೊಂಡಿದ್ದಾರೆ. ಈ ವಿಷಯವನ್ನು ಫೇಸ್ಬುಕ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಮಾಧ್ಯಮಗಳು ಅಹಿಂಸೆಯಂತಹ ಉದಾತ್ತ ವಿಚಾರಗಳನ್ನು ಪ್ರಕಟಿಸುವ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
ಸಮಾನತೆಗೆ ಹೆಚ್ಚಿನ ಗೌರವ, ಮೌಲ್ಯವನ್ನು ನೀಡುವ ಎಲ್ಲಾ ಜನರಿಗೆ ನಾನು ಅಭಿನಂದಿಸುತ್ತೇನೆ. ಮಾನವ ಸಮುದಾಯ ಸಮಾಜದಲ್ಲಿ ಅತ್ಯಂತ ಪ್ರಧಾನವೆಂದು ನಂಬಿರುವ ಜನರು ಸಮಾಜದ ಸವಲತ್ತುಗಳ ದುರುಪಯೋಗ ಮಾಡಬಾರದು. ನಮಗೆ ಈ ಸಂದೇಶವನ್ನು ನೀಡುವ ದಿಸೆಯಲ್ಲಿ ಈ ಗೌರವಾನ್ವಿತ ವ್ಯಕ್ತಿ ತನ್ನ ಜೀವವನ್ನೇ ಅರ್ಪಿಸುತ್ತಿದ್ದಾನೆ. ಪ್ರಾಣಿಗಳಿಗೆ ದಯೆ ತೋರುವ ಮೂಲಕ ಅಹಿಂಸೆಯ ಮಾರ್ಗದಲ್ಲಿ ಸಾಗಲು ಇದು ನಮಗೊಂದು ಪಾಠವಾಗಿದೆ ಎಂದು ಅವರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.