ನವದೆಹಲಿ: ಪ್ರತಿಭಟನೆಗಳ ನಡುವೆಯೂ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗೆಗಿನ ಸೆಮಿನಾರ್ ಶನಿವಾರ ಆರಂಭಗೊಂಡಿದೆ.
ಎರಡು ದಿನಗಳ ಸೆಮಿನಾರ್ ಇದಾಗಿದ್ದು, ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಉದ್ಘಾಟನಾ ಸೆಷನ್ನಲ್ಲಿ ಮಾತನಾಡಲಿದ್ದಾರೆ. ‘ಶ್ರೀರಾಮ ಜನ್ಮಭೂಮಿ ಟೆಂಪಲ್: ಎಮರ್ಜಿಂಗ್ ಸಿನಾರಿಯೋ’ ಎಂಬ ವಿಷಯದ ಮೇಲೆ ಸೆಮಿನಾರ್ ನಡೆಯುತ್ತಿದೆ.
ವಿಶ್ವವಿದ್ಯಾನಿಲಯದ ಆರ್ಟ್ಸ್ ಫ್ಯಾಕಲ್ಟಿಯಲ್ಲಿ ಅರುಂಧತಿ ವಶಿಷ್ಠ ಅನುಸಂಧಾನ್ ಪೀಠ್ ಇದನ್ನು ಆಯೋಜಿಸುತ್ತಿದೆ. ಇದೊಂದು ಸಂಶೋಧನಾ ಸಂಸ್ಥೆಯಾಗಿದ್ದು, ವಿಎಚ್ಪಿಯ ದಿವಂಗತ ಮುಖಂಡ ಅಶೋಕ್ ಸಿಂಘಾಲ್ ಸ್ಥಾಪಿಸಿದ್ದರು.
ಈ ಸೆಮಿನಾರನ್ನು ವಿರೋಧಿಸಿ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಗಳು ದೆಹಲಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ತೀವ್ರ ಪ್ರತಿಭಟನೆಯನ್ನು ನಡೆಸುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವವಿದ್ಯಾನಿಲಯ, ಸೆಮಿನಾರ್ಗೂ ನಮಗೂ ಸಂಬಂಧವಿಲ್ಲ, ಸೆಮಿನಾರ್ ನಡೆಸಲು ಸ್ಥಳಾವಕಾಶವನ್ನು ನಾವು ಹೊರಗಿನವರಿಗೂ ನೀಡುತ್ತೇವೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.