ಬೈಂದೂರು : ರಜಾ ಕಾಲದಲ್ಲಿ ಮಕ್ಕಳಿಗೆ ನಾಟಕ, ಅಭಿನಯ ಕಲೆಗಳ ಶಿಕ್ಷಣ ನೀಡುವ ಮೂಲಕ ರಂಗಭೂಮಿಯತ್ತ ಸೆಳೆಯುವುದು ಉತ್ತಮ ಬೆಳವಣಿಗೆ. ಮಕ್ಕಳಲ್ಲಿರುವ ಪ್ರತಿಭೆ ಮತ್ತು ಸೃಜನಶೀಲತೆ ವ್ಯಕ್ತಪಡಿಸಲು ಇಂತಹ ತರಬೇತಿ ಶಿಬಿರಗಳು ಒಂದು ವೇದಿಕೆಯಾಗಲಿದೆ ಎಂದು ಯಡ್ತರೆ ಸಹಿಪ್ರಾ ಶಾಲಾ ಮುಖ್ಯಶಿಕ್ಷಕ ಎಚ್. ಕೃಷ್ಣಪ್ಪ ಶೆಟ್ಟಿ ಹೇಳಿದರು.
ಅವರು ಲಾವಣ್ಯ ರಂಗಮನೆಯಲ್ಲಿ ನಡೆದ ಮಕ್ಕಳ ಲಾವಣ್ಯ ರಂಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಉತ್ತಮ ರಂಗನಿರ್ದೇಶಕರು ಶಿಕ್ಷಕರಿಗೂ ಇಂತಹ ತರಬೇತಿಗಳನ್ನು ನೀಡಿದರೆ ಶಾಲಾ ರಜಾಕಾಲದಲ್ಲಿ ತರಬೇತಿ ಪಡೆದ ಶಿಕ್ಷರು ಕೂಡ ತಮ್ಮ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇದಕ್ಕೆ ಪೋಷಕರ ಪ್ರೋತ್ಸಾವೂ ಅಗತ್ಯವಾಗಿದೆ ಎಂದ ಅವರು ಇತ್ತಿಚಿನ ದಿನಗಳಲ್ಲಿ ಪೋಷಕರ ಆಸಕ್ತಿ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದ್ದು, ಇದರಿಂದ ಮುಂದಿನ ಪೀಳಿಗೆಯವರಿಗೆ ರಂಗಭೂಮಿಯ ಒಲವು ಕಡಿಮೆಯಗುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ತರಬೇತುದಾರ ರಂಗನಿರ್ದೇಶಕ ಸತ್ಯನಾ ಕೊಡೇರಿ ಮಾತನಾಡಿ, ಪ್ರಕ್ರೀಯೆಯಲ್ಲಿ ಗುಣಮಟ್ಟದ ಕಲಿಕೆ ಇದೆ. ಮಕ್ಕಳಿಗೆ ಶಿಬಿರದಲ್ಲಿ ರಂಗಭೂಮಿಯ ಎಲ್ಲಾ ವಿಭಾಗಗಳನ್ನು ಒಳಗೊಂಡ ತರಬೇತಿಯನ್ನು ಸಮಾನವಾಗಿ ಗುರುತಿಸಿ ನೀಡಲಾಗುವುದು. ಇದಕ್ಕಾಗಿ ಮಕ್ಕಳ ಪೋಷಕರು ತಮ್ಮ ಸಲಹೆ ಸೂಚನೆಗಳನ್ನು ನೀಡುವುದರ ಮೂಲಕ ಶಿಬಿರದ ಯಶಸ್ಸಿಗೆ ಸಹಕರಿಸಬೆಕೆಂದು ಮನವಿ ಮಾಡಿದರು.
ಲಾವಣ್ಯ ಅಧ್ಯಕ್ಷ ಯೋಗೀಶ್ ಬಂಕೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನರಸಿಂಹ ನಾಯಕ್ ಸ್ವಾಗತಿಸಿ, ವ್ಯವಸ್ಥಾಪಕ ಬಿ. ಗಣೇಶ ಕಾರಂತ್ ವಂದಿಸಿದರು. ಖಜಾಂಚಿ ನಾಗರಾಜ ಪಿ. ಯಡ್ತರೆ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ 60 ಮಕ್ಕಳು ಪಾಲ್ಗೊಂಡಿದ್ದು, ಇವರಿಗೆ ತರಬೇತಿ ನೀಡಿದ ನಾಟಕ ಮೇ.11 ರಂದು ಬೈಂದೂರು ಶ್ರೀಶಾರದಾ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.