ನವದೆಹಲಿ: ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟುವಿಗೆ ಸುಪ್ರೀಂಕೋಟ್ ನಿಷೇಧ ಹೇರಿದರೂ ಕೇಂದ್ರ ಪರಿಸರ ಸಚಿವಾಲಯ ಶುಕ್ರವಾರ ಗ್ರೀನ್ ಸಿಗ್ನಲ್ ನೀಡಿದೆ.
ಪೊಂಗಲ್ ಹಬ್ಬದ ಸಂದರ್ಭ ತಮಿಳುನಾಡಿನಲ್ಲಿ ಜಲ್ಲಿಕಟ್ಟನ್ನು ಆಚರಿಸಲಾಗುತ್ತದೆ, ಈ ಆಚರಣೆಗೆ ಅನುಮತಿಯನ್ನು ನೀಡಬೇಕೆಂದು ತಮಿಳುನಾಡು ಬಿಜೆಪಿ ಪರಿಸರ ಸಚಿವಾಲಯದ ಮೇಲೆ ತೀವ್ರ ಒತ್ತಡ ತಂದಿತ್ತು. ಈ ಹಿನ್ನಲೆಯಲ್ಲಿ ಕೊನೆಗೂ ಸಚಿವಾಲಯ ಅನುಮತಿಯನ್ನು ನೀಡಿದೆ.
ಆ ಕ್ರೀಡೆಯ ವೇಳೆ ಎತ್ತುಗಳಿಗೆ ತೀವ್ರ ಸ್ವರೂಪದ ಗಾಯಗಳಾಗುತ್ತದೆ ಎಂದು ಆರೋಪಿಸಿರುವ ಪ್ರಾಣಿ ಪ್ರಿಯರು, ಅನುಮತಿ ನೀಡಿದ ಸರ್ಕಾರದ ಕ್ರಮವನ್ನು ವಿರೋಧಿಸಿದ್ದಾರೆ. ಅಲ್ಲದೇ ಎನಿಮಲ್ ವೆಲ್ಫೇರ್ ಬೋರ್ಡ್ನ ಸದಸ್ಯರು ಈ ಬಗ್ಗೆ ಪರಿಸರ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
2014ರ ಮೇನಲ್ಲಿ ಸುಪ್ರೀಂಕೋರ್ಟ್ ಜಲ್ಲಿಕಟ್ಟುವಿಗೆ ನಿಷೇಧ ಹೇರಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.