ಮುಂಬಯಿ: ಇಲ್ಲಿ ನಡೆಯುತ್ತಿರುವ ಅಂತರ್-ಶಾಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ 15 ವರ್ಷದ ಪ್ರಣವ್ ಧಾನವಾಡೆ ಒಂದೇ ಇನ್ನಿಂಗ್ಸ್ನಲ್ಲಿ 1009 ರನ್ ಗಳಿಸಿ ಇತಿಹಾಸ ನಿರ್ಮಿಸಿದ್ದಾನೆ. ಕ್ರಿಕೆಟ್ ಇತಿಹಾಸದಲ್ಲಿ 1009 ರನ್ ಬಾರಿಸಿದ ಏಕೈಕ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದು, ಈ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾನೆ.
ಮುಂಬಯಿಯ ಕೆ.ಸಿ. ಗಾಂಧಿ ಪ್ರೌಢ ಶಾಲೆಯ ಆರಂಭಿಕ ಬ್ಯಾಟ್ಸ್ಮನ್ ಪ್ರಣವ್, ಮುಂಬಯಿ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ಭಂಡಾರಿ ಕಪ್ ಅಂತರ್-ಶಾಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್ಯ ಗುರುಕುಲ ವಿರುದ್ಧ ಈ ಸಾಧನೆ ಮಾಡಿದ್ದಾನೆ. 312.38 ಸರಾಸರಿಯಲ್ಲಿ 323 ಎಸೆತಗಳಲ್ಲೇ 1009 ರನ್ ಬಾರಿಸಿದ್ದು, ಇದು 129 ಬೌಂಡರಿ ಮತ್ತು 59 ಸಿಕ್ಸ್ ಒಳಗೊಂಡಿತ್ತು.
ಪ್ರಣವ್ನ ಈ ವೈಯಕ್ತಿಕ ದಾಖಲೆ ಕ್ರಿಕೆಟ್ನ ಎಲ್ಲಾ ಪ್ರಕಾರಗಳಲ್ಲೂ ಐತಿಹಾಸಿಕ ದಾಖಲೆಯಾಗಿದೆ. 1899ರಲ್ಲಿ ಯು.ಕೆ.ಯ ಕ್ಲಾರ್ಕ್ ಹೌಸ್ ಪರ ಆಡಿದ ಎಇಜೆ ಕಾಲಿನ್ಸ್ ಅವರ 628 ಈ ಹಿಂದಿನ ಸಾಧನೆಯಾಗಿದೆ. ಹ್ಯಾರಿಸ್ ಶೀಲ್ಡ್ ಪಂದ್ಯಾಟದಲ್ಲಿ ರಿಜ್ವಿ ಸ್ಪ್ರಿಂಗ್ಫೀಲ್ಡ್ ಪರ 2013ರಲ್ಲಿ ಆಡಿದ ಮುಂಬಯಿ ಕ್ರಿಕೆಟಿಗ ಪೃಥ್ವಿ ಶಾ 546 ರನ್ ಬಾರಿಸಿದ್ದು ಭಾರತದ ಶಾಲಾ ಮಟ್ಟದ ಕ್ರಿಕೆಟ್ನಲ್ಲಿ ಈ ಹಿಂದಿನ ವೈಯಕ್ತಿಕ ದಾಖಲೆಯಾಗಿದೆ.
ಎಂಸಿಎ ಕೋಚ್ ಮೊಬಿನ್ ಶೇಖ್ ಅಡಿಯಲ್ಲಿ ತರಬೇತಿ ಪಡೆಯುತ್ತಿರುವ ಪ್ರಣವ್, ರಿಕ್ಷಾ ಚಾಲಕ ಪ್ರಶಾಂತ್ ಧನವಾಡೆ ಅವರ ಪುತ್ರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.