ಜನವರಿ 12, 2016 ರಂದು ಸ್ವಾಮಿ ವಿವೇಕಾನಂದರ 153 ನೇ ಜಯಂತಿ ಮತ್ತು ರಾಷ್ಟೀಯ ಯುವ ದಿನದ ಅಂಗವಾಗಿ ರಾಜ್ಯದಾದ್ಯಂತ ವಿವೇಕ್ ಬ್ಯಾಂಡ್ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಯುವಕ- ಯುವತಿಯರು ತಮ್ಮ ಬಲಗೈಗೆ ವಿವೇಕ್ಬ್ಯಾಂಡ್ನ್ನು ಧರಿಸಲಿದ್ದು, ವಿವೇಕಾನಂದರು ಯುವಜನರಿಗೆ ನೀಡಿದ ‘ಉತ್ತಮನಾಗು-ಉಪಕಾರಿಯಾಗು’ (BE GOOD – DO GOOD) ಎಂಬ ಸಂದೇಶವನ್ನು ತಾವು ಪಾಲನೆ ಮಾಡುವ ಸಂಕಲ್ಪ ತೊಡಲಿದ್ದಾರೆ. ವಿವೇಕ್ ಬ್ಯಾಂಡ್ ಕೈಯಲ್ಲಿ ಧರಿಸುವುದರೊಂದಿಗೆ ಆ ದಿನ ಆರಂಭವಾಗಲಿರುವ ಅಭಿಯಾನವು 26೬ ಜನವರಿ 2015 ರ ವರೆಗೆ 2 ವಾರ ನಡೆಯಲಿರುವ ಈ ಬೃಹತ್ ಯುವ ಅಭಿಯಾನದಲ್ಲಿ ಸುಮಾರು 12 ಲಕ್ಷ ಯುವಕ- ಯುವತಿಯರು ಭಾಗವಹಿಸಲಿದ್ದಾರೆ. ಬೆಂಗಳೂರಿನ ಸಾಮಾಜಿಕ ಸಂಸ್ಥೆ ಸಮರ್ಥ ಭಾರತ ಈ ಯುವ ಅಭಿಯಾನವನ್ನು ಆಯೋಜಿಸಿದೆ.
ಕಾಲೇಜು ವಿದ್ಯಾರ್ಥಿಗಳು, ಯುವ ಉದ್ಯೋಗಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ತಮ್ಮ ವೈಯಕ್ತಿಕ ಜೀವನದಲ್ಲಿ ಉತ್ತಮ ಗುಣಸ್ವಭಾವಗಳನ್ನು ಮೈಗೂಡಿಸುವುದರ ಜತೆಗೆ ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶ. ಹೆಚ್ಚಿನ ಯುವ ಜನತೆಯನ್ನು ಸ್ಪೂರ್ತಿದಾಯಕ ಕಾರ್ಯಗಳಿಗೆ ಪ್ರೇರೇಪಿಸಿ ಈ ಮೂಲಕ ಅನೇಕ ಇತರರಿಗೆ ಆದರ್ಶ ವ್ಯಕ್ತಿಗಳಾಗುವ ಮೂಲಕ “ಉತ್ತಮನಾಗು-ಉಪಕಾರಿಯಾಗು” ಎಂಬ ಪರಂಪರೆಯನ್ನು ನಿರ್ಮಿಸುವ ಆಶಯವನ್ನು ಈ ಅಭಿಯಾನ ಹೊಂದಿದೆ.
ಈ ಸಂದೇಶವು ಹೆಚ್ಚಿನ ಯುವ ಜನತೆಗೆ ತಲುಪಲು ತಂತ್ರಜ್ಞಾನಾಧಾರಿತ ವೇದಿಕೆಗಳಾದ ಸಮರ್ಥ ಭಾರತ ವೆಬ್ಸೈಟ್, ಸಾಮಾಜಿಕ ಜಾಲತಾಣಗಳು , ವಾಟ್ಸಪ್, ಮತ್ತು ಎಸ್ಎಮ್ಎಸ್ ಗಳನ್ನು ಬಳಸುವ ಮೂಲಕ “ವಿವೇಕ್ ಬ್ಯಾಂಡ್” ಅಭಿಯಾನದ ಪ್ರಚಾರ ನಡೆಸಲಾಗುತ್ತಿದೆ. ಇದಲ್ಲದೇ ಈ ವೇದಿಕೆಗಳು ವಿವೇಕ್ ಬ್ಯಾಂಡ್ ಧರಿಸುವವರಿಗೆ ಸ್ಪೂರ್ತಿದಾಯಕ ಅನುಭವಗಳನ್ನು ಹಂಚಿಕೊಳ್ಳಲೂ ಲಭ್ಯವಿರುತ್ತದೆ.
ಅನೇಕ ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು, ಸಾಂಸ್ಕೃತಿಕ ಸಂಘಗಳು,ಸಮಾಜದ ಅನೇಕ ಕ್ಷೇತ್ರಗಳಲ್ಲಿ ಹೆಸರಾಂತ ಗಣ್ಯರು ಈ ಅಭಿಯಾನಕ್ಕೆ ದನಿಗೂಡಿಸಿದ್ದಾರೆ .
ನಮ್ಮ ಅಭಿಯಾನದ ರಾಯಭಾರಿಗಳು :-
ಸ್ಮೃತಿ ಇರಾನಿ, ಕೇಂದ್ರ ಮಾನವ ಸಂಪನ್ಮೂಲ ಸಚಿವರು, ಭಾರತ ಸರಕಾರ
ಡಾ|| ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು ಧರ್ಮಸ್ಥಳ ದೇವಸ್ಥಾನ
ಪೂಜ್ಯ ಶ್ರೀ ನಿರ್ಮಲನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ
ಡಾ|| ಅಣ್ಣಾದೊರೈ, ಇಸ್ರೋ ವಿಜ್ಞಾನಿಗಳು ಮತ್ತು ಮಂಗಳಯಾನ ಕಾರ್ಯಕ್ರಮದ ಮುಖ್ಯಸ್ಥರು
ನ್ಯಾ.ಮೂ. (ನಿವೃತ್ತ ) ಶಿವರಾಜ ಪಾಟೀಲ್, ಹೆಸರಾಂತ ಕಾನೂನು ತಜ್ಞರು
ಪದ್ಮಭೂಷಣ ಡಾ|| ದೇವಿ ಶೆಟ್ಟಿ, ಹೃದಯ ತಜ್ಞರು ಮತ್ತು ಮುಖ್ಯಸ್ಥರು ನಾರಾಯಣ ಹೃದಯಾಲಯ ಸಂಸ್ಥೆ
ಶ್ರೀನಗರ ಕಿಟ್ಟಿ , ಕನ್ನಡ ಸಿನೆಮಾ ನಟರು
ಬಿ.ಸಿ. ಪಾಟೀಲ್, ಕನ್ನಡ ಸಿನೆಮಾ ನಟರು
ಮಮತಾ ಪೂಜಾರಿ, ಭಾರತೀಯ ಮಹಿಳಾ ಕಬ್ಬಡ್ಡಿ ತಂಡದ ನಾಯಕರು
ಪೂಜ್ಯ ಶ್ರೀ ಪ್ರಕಾಶಾನಂದ ಸ್ವಾಮೀಜಿ, ರಾಮಕೃಷ್ಣಾಶ್ರಮ
ಡಾ|| ಶರಣ್ ಪಾಟೀಲ್, ಮೂಳೆ ತಜ್ಞರು ಮತ್ತು ಮುಖ್ಯಸ್ಥರು ಸ್ಪರ್ಷ ಆಸ್ಪತ್ರೆಗಳ ಸಮೂಹ
ಚಕ್ರವರ್ತಿ ಸೂಲಿಬೆಲೆ, ಸಾಮಾಜಿಕ ಕಾರ್ಯಕರ್ತರು, ಅಂಕಣಕಾರ-ಭಾಷಣಕಾರರು
ಮಿಥುನ್ ಅಭಿಮನ್ಯು, ಕ್ರಿಕೆಟ್ ಆಟಗಾರರು
ಗುರುಕಿರಣ್, ಸಂಗೀತ ನಿರ್ದೇಶಕರು
ಡಾ|| ಸಿ.ಎಸ್. ರಾವ್, ಅಧ್ಯಕ್ಷರು ರಿಲಾಯನ್ಸ ಕಮ್ಮ್ಯುನಿಕೇಶನ್
ಅರ್ಜುನ್ ದೇವಯ್ಯ, ಏಶಿಯನ್ ಗೇಮ್ಸ ಸ್ವರ್ಣ ಪದಕ ವಿಜೇತರು
ರೂಪಿಕಾ, ಕನ್ನಡ ಅಭಿನೇತ್ರಿ
ಜನವರಿ 5, 2016 ರ ನಂತರ ರಾಜ್ಯದ ಅನೇಕ ಚಿಲ್ಲರೆ ಮಳಿಗೆಗಳಲ್ಲಿ ವಿವೇಕ ಬ್ಯಾಂಡ್ ಲಭ್ಯವಿರುತ್ತದೆ. ಎಲ್ಲಾ ಮಾರಾಟ ಮಳಿಗೆಗಳ ಸಮಗ್ರ ವಿವರಗಳು www.samarthabharata.org, www.vivekband.com ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9880621824, 9663330692 (ಬೆಂಗಳೂರು) , 9448111824 (ಹುಬ್ಬಳ್ಳಿ), 9739953063 (ಮಂಗಳೂರು) ಇಮೈಲ್ ವಿಳಾಸ: reachout.sb@gmail.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.