ನವದೆಹಲಿ: ಕ್ರಿಕೆಟ್ ಜಗತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಉತ್ತಮ ಸಾಧನೆ ಮಾಡಿದ ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, 2015ನೇ ಸಾಲಿನ ’ಬಿಸಿಸಿಐ ವರ್ಷದ ಕ್ರಿಕೆಟಿಗ’ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ ವೇಳೆ ಮಿಥಾಲಿ ರಾಜ್ ಅಗ್ರ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಶಸ್ತಿಯನ್ನು ಜನವರಿ 5ರಂದು ಮುಂಬಯಿಯಲ್ಲಿ ನೀಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ಆಸ್ಟ್ರೇಲಿಯ ಪ್ರವಾಸದ ಸಂದರ್ಭ ಟೆಸ್ಟ್ ಕ್ರಿಕೆಟ್ಗೆ ಮಹೇಂದ್ರ ಸಿಂಗ್ ಧೋನಿ ವಿದಾಯ ಹೇಳಿದ್ದು, ಆ ಬಳಿಕ ಧೋನಿ ಕೊಹ್ಲಿ ನಾಯಕತ್ವದಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿದೆ. 22 ವರ್ಷಗಳ ಬಳಿಕ ಶ್ರೀಲಂಕಾ ನೆಲದಲ್ಲಿ ಸರಣಿ ಜಯ, ದಕ್ಷಿಣ ಆಫ್ರಿಕಾ ವಿರುದ್ಧ 9 ವರ್ಷಗಳಲ್ಲೇ ಮೊದಲ ಸರಣಿ ಜಯದೊಂದಿಗೆ ಓರ್ವ ಸಮರ್ಥ ನಾಯಕತ್ವವನ್ನು ತೋರಿದ್ದಾರೆ.
ಬ್ಯಾಟಿಂಗ್ನಲ್ಲೂ ಉತ್ತಮ ಸಾಧನೆ ತೋರಿದ ಕೊಹ್ಲಿ 15 ಟೆಸ್ಟ್ ಇನ್ನಿಂಗ್ಸ್ನಿಂದ 42.67 ಸರಾಸರಿಯಲ್ಲಿ 640 ರನ್ ಹಾಗೂ 20 ಏಕದಿನಗಳಲ್ಲಿ 36.65 ಸರಾಸರಿಯೊಂದಿಗೆ 623 ರನ್ ಬಾರಿಸಿದ್ದಾರೆ.
ಮತ್ತೊಂಡೆದೆ ಮಿಥಾಲಿ ರಾಜ್ ಏಕದಿನ ಕ್ರಿಕೆಟ್ನಲ್ಲಿ 5000 ರನ್ ಪೂರೈಸಿದ ಮೊದಲ ಭಾರತೀಯ ಹಾಗೂ ವಿಶ್ವದ ಎರಡನೇ ಮಹಿಳಾ ಕಿಕೆಟ್ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಅವರು ಎಂ.ಎ. ಚಿದಂಬರಂ ಟ್ರೋಫಿ ಪಡೆಯಲಿದ್ದಾರೆ.
ಈ ವೇಳೆ ಇತರ ಆಟಗಾರರಾದ ಮಾಜಿ ಕ್ರಿಕೆಟಿಗ, ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಕರ್ನಲ್ ಸಿ.ಕೆ. ನಾಯ್ಡು ಜೀವನಶ್ರೇಷ್ಠ ಸಾಧನೆ ಪ್ರಶಸ್ತಿ ಹಾಗೂ ಈ ವರ್ಷ ರಣಜಿ ಟ್ರೋಫಿಯ 11 ಪಂದ್ಯಗಳಿಂದ 50.66 ಸರಾಸರಿಯಲ್ಲಿ ಅತ್ಯಧಿಕ 912 ರನ್ ಬಾರಿಸಿದ ಕರ್ನಾಟಕದ ರಾಬಿನ್ ಉತ್ತಪ್ಪ ಮಾಧವರಾವ್ ಸಿಂಧ್ಯಾ ಪ್ರಶಸ್ತಿ ಪಡೆಯಲಿದ್ದಾರೆ.
ಕರ್ನಾಟಕ ರಾಜ್ಯವು ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಹಾಗೂ ಇರಾನಿ ಕಪ್ ಜಯಿಸಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ನ್ನು ಈ ವರ್ಷದ ರಾಜ್ಯ ಅಸೋಸಿಯೇಶನ್ ಆಗಿ ನೇಮಕ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.