ಬೀಜಿಂಗ್: ತೈವಾನ್ನಲ್ಲಿ ಹೊಸದಾಗಿ ಆರಂಭಿಸಲಾಗಿರುವ ವಸ್ತುಸಂಗ್ರಹಾಯಲದಲ್ಲಿ ನಟ ಜಾಕಿ ಚಾನ್ ದಾನವಾಗಿ ನೀಡಿದ್ದ ಎರಡು ಪ್ರತಿಮೆಗಳ ಮೇಲೆ ಪೇಂಟ್ ಸುರಿದು ಚೀನಾ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ. ತೈವಾನ್ ದ್ವೀಪದಲ್ಲಿ ಬೀಜಿಂಗ್ ತನ್ನ ಪ್ರಭಾವ ಬೀರುವುದರ ಕುರಿತು ವಿರೋಧ ವ್ಯಕ್ತವಾಗುತ್ತಿದೆ ಎಂದು ತಿಳಿದು ಬಂದಿದೆ.
ಚಿಯಾಯಿ ನಗರದ ದಕ್ಷಿಣದಲ್ಲಿರುವ ತೈಪೈಯ ಪ್ರಸಿದ್ಧ ನ್ಯಾಶನಲ್ ಪ್ಯಾಲೇಸ್ ಮೂಸಿಯಂನ ಹೊಸ ಶಾಖೆ ತೆರೆಯಲಾಗಿದ್ದು, ಇದರ ಹೂದೋಟದಲ್ಲಿದ್ದ ಕಂಚಿನ ಡ್ರ್ಯಾಗನ್ ಹಾಗೂ ಕುದುರೆಯ ಮುಖವಿದ್ದ ಪ್ರತಿಮೆಯನ್ನು ವಿರೂಪಗೊಳಿಸಿದ ಸ್ಥಿತಿಯಲ್ಲಿ ಕಂಡು ಬಂದಿದೆ ಎಮದು ಮ್ಯೂಸಿಯಂ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರತಿಮೆಗಳು ಚೀನಾದ ಕ್ವಿಂಗ್ ರಾಜವಂಶದ ಪ್ರಾಚೀನ ಅವಶೇಷಗಳ ಪ್ರತಿಕೃತಿಗಳಾಗಿದ್ದು, ಇಲ್ಲಿನ ಜನಾಂಗ ವಿದೇಶಿ ಆಕ್ರಮಣಕಾರರ ಅಡಿಯಲ್ಲಿ ಬಳಲಿದ್ದರ ಸಂಕೇತಗಳಾಗಿವೆ. ಇಬ್ಬರು ಅಪರಿಚಿತ ಕಿಡಿಗೇಡಿಗಳು ಈ ಪ್ರತಿಮೆಗಳ ಮುಖದ ಮೇಲೆ ಕೆಂಪು ಬಣ್ಣ ಸುರಿದಿದ್ದು, ಅದರ ಅಡಿಪಾಯಗಳ ಮೇಲೆ ’ಕಲ್ಚರಲ್ ಯುನೈಟೆಡ್ ಫ್ರಂಟ್’ ಎಂದು ಬರೆಯಲಾಗಿದೆ.
ಈ ಘೋಷಣೆಯು ಚೀನಾವು ಸಾಂಸ್ಕೃತಿಕ ಪ್ರಭಾವದ ಮೂಲಕ ತೈವಾನ್ನ್ನು ತನ್ನ ತೆಕೆಗೆ ತರುವ ಪ್ರಯತ್ನಗಳ ವಿರುದ್ಧ ತೈವಾನ್ ಬಳಸುತ್ತಿರುವ ನಿರ್ಣಾಯಕ ಪದಗಳಾಗಿವೆ. ಆಂತರಿಕ ಯುದ್ಧದ ಬಳಿಕ 1949ರಲ್ಲಿ ಚೀನಾದಿಂದ ಬೇರ್ಪಟ್ಟ ತೈವಾನ್ ಸ್ವ-ಆಡಳಿತ ನಡೆಸುತ್ತಿದ್ದು, ಆದರೆ ಏಕೀಕರಣದ ಭಾಗವಾಗಿ ಬೀಜಿಂಗ್ ಮತ್ತೆ ತನ್ನ ವಶಕ್ಕೆ ತರಲು ಪ್ರಯತ್ನಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.