ಲಾಹೋರ್: ಅಫ್ಘಾನಿಸ್ಥಾನದ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಂಜೆ ಪಾಕಿಸ್ಥಾನದ ಲಾಹೋರ್ನಲ್ಲಿ ಬಂದಿಳಿದಿದ್ದಾರೆ. ಪ್ರಧಾನಿ ನವಾಝ್ ಷರೀಫ್ ಅವರನ್ನು ಲಾಹೋರ್ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡರು.
ಉಭಯ ನಾಯಕರು ಪರಸ್ಪರ ತಬ್ಬಿಕೊಂಡು ಆತ್ಮೀಯತೆ ಮೆರೆದರು. ಬಳಿಕ ಶರೀಫ್ ಮತ್ತು ಮೋದಿಯವರು ಹೆಲಿಕಾಫ್ಟರ್ ಮೂಲಕ ಲಾಹೋರ್ ಬಳಿ ಇರುವ ಶರೀಫ್ ಅವರ ನಿವಾಸ ಜಟಿ ಉಮ್ರಾಗೆ ತೆರಳಿದರು.
ಉಭಯ ನಾಯಕರುಗಳು ಸುಮಾರು 90 ನಿಮಿಷಗಳ ಕಾಲ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಇಂದು ಶರೀಫ್ ಅವರ ಹುಟ್ಟಹಬ್ಬವಾದ್ದರಿಂದ ಔತಣಕೂಟವನ್ನು ಏರ್ಪಡಿಸಲಾಗಿದ್ದು, ವಿವಿಧ ಭಕ್ಷ ಭೋಜ್ಯಗಳು ತಯಾರಾಗಿವೆ. ಆದರೆ ಮೋದಿಯವರು ಪಾಲಕ್ ಪನ್ನೀರ್ ಜೊತೆ ಸಸ್ಯಾಹಾರಿ ಭೋಜ್ಯಗಳನ್ನು ಸೇವಿಸಲಿದ್ದಾರೆ ಎನ್ನಲಾಗಿದೆ.
ಪಾಕಿಸ್ಥಾನಕ್ಕೆ ತೆರಳಿದ ಭಾರತದ ಪ್ರಧಾನ. ಲಾಹೋರ್ನಲ್ಲಿ ಭಾರಿ ಕಟ್ಟೆಚ್ಚರ.
2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಭೇಟಿ ನೀಡಿದ್ದರು. ಇದೀಗ 11 ವರ್ಷಗಳ ನಂತರ ಭಾರತದ ಪ್ರಧಾನಿಯ ಮೊದಲ ಪಾಕಿಸ್ಥಾನ ಭೇಟಿ ಇದಾಗಿದೆ. ಈ ಭೇಟಿ ಉಭಯ ದೇಶಗಳಲ್ಲೂ ಭಾರೀ ಕುತೂಹಲ ಕೆರಳಿಸಿದೆ.
ಮೋದಿ ಅನಿರೀಕ್ಷಿತ ಭೇಟಿ ಕುರಿತು ಹಲವರು ಪರ ವಿರೋಧ ಟೀಕೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.