ಬಾಗ್ದಾದ್: ಭಯೋತ್ಪಾದನೆಗೆ ನಲುಗಿ ಹೋಗಿರುವ ಇರಾಕ್ನಲ್ಲಿ 40 ವರ್ಷಗಳ ಬಳಿಕ ಈ ವರ್ಷ ಸೌಂದರ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶೈಮಾ ಖ್ವಾಸಿಂ ಎಂಬ 20ವರ್ಷದ ಯುವತಿ ಮಿಸ್ ಇರಾಕ್ ಆಗಿ ಹೊರಹೊಮ್ಮಿದ್ದಾಳೆ. ಆದರೆ ಕಿರೀಟ ಮುಡಿಗೇರಿಸಕೊಂಡ ಕೆಲವೇ ಕಲವೇ ಗಂಟೆಗಳಲ್ಲಿ ಆಕೆಗೆ ಇಸಿಸ್ ಉಗ್ರರಿಂದ ಬೆದರಿಕೆ ಕರೆ ಬಂದಿದೆ.
ನೀನು ಇಸಿಸ್ ಸಂಘಟನೆಗೆ ಸೇರಬೇಕು, ಇಲ್ಲವಾದರೆ ನಿನ್ನನ್ನು ಕಿಡ್ನ್ಯಾಪ್ ಮಾಡುತ್ತೇವೆ ಎಂದು ದೂರವಾಣಿ ಮೂಲಕ ಕರೆ ಮಾಡಿ ಆಕೆಗೆ ಬೆದರಿಯೊಡ್ಡಲಾಗಿದೆ.
ಆದರೆ ದಿಟ್ಟತನ ಪ್ರದರ್ಶಿಸಿರುವ ಖ್ವಾಸಿಂ ಇಂತಹ ಬೆದರಿಕೆಗೆಲ್ಲ ನಾನು ಹೆದರವುದಿಲ್ಲ, ಎಂತಹ ಕಷ್ಟ ಬಂದರೂ ಮುಂದುವರೆಯುತ್ತೇನೆ ಎಂದಿದ್ದಾಳೆ.
1979ರ ಬಳಿಕ ಉಗ್ರರ ಭಯದಿಂದಾಗಿ ಇರಾಕ್ನಲ್ಲಿ ಸೌಂಧರ್ಯ ಸ್ಪರ್ಧೆಯನ್ನು ನಿಲ್ಲಿಸಲಾಗಿತ್ತು, ಆದರೆ ಈ ವರ್ಷ ಅಲ್ಲಿನ ಆಯೋಜಕರು ದಿಟ್ಟತನ ಪ್ರದರ್ಶಿಸಿ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.