ಉಪ್ಪುಂದ: ಭಾರತದ ಶೌಚಾಲಯ ನಿರ್ಮಾಣ ಕಾರ್ಯಕ್ರಮ ಜೆಸಿಐ ಸಮಧಾನ್ ಯೋಜನೆಯ ಮೂಲಕ ಉಪ್ಪುಂದ ಜೆಸಿಐ, ಜ್ಯೂನಿಯರ್ ಜೇಸಿ ವಿಂಗ್ ಹಾಗೂ ಜೇಸಿರೇಟ್ ವಿಂಗ್ಗಳ ಸಹಕಾರದಲ್ಲಿ ಉಪ್ಪುಂದ ಗ್ರಾಮದ ಮಡಿಕಲ್ ಹಾಗೂ ಬಾಯಂಹಿತ್ಲುನಲ್ಲಿ ನಿರ್ಮಾಣಗೊಂಡ 2 ಶೌಚಾಲಯ ಘಟಕಗಳನ್ನು ವಲಯಾಧಿಕಾರಿಗಳಾದ ಜೆಎಫ್ಎಮ್ ಪ್ರಕಾಶ ಭಟ್ ಮತ್ತು ವಲಯ 15ರ ಸಂಯೋಜಕ ವೈ. ಮಂಗೇಶ್ ಶ್ಯಾನುಭಾಗ್ ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಮಡಿಕಲ್ ಕಟ್ಟಿನಬುಡ ನಿವಾಸಿ ವಿಕಲಚೇತನ ಮಹಿಳೆ ಮಂಜಿ ಹಾಗೂ ಬಾಯಂಹಿತ್ಲು ನಿವಾಸಿ ವಿಕಲಚೇತನ ಮಹಿಳೆ ಹೇಮಾ ಇವರು ಮನೆಯ ಶೌಚಾಲಯ ನಿರ್ಮಾಣ ಕಾರ್ಯದಲ್ಲಿ ಜೆಸಿಐ ಉಪ್ಪುಂದ ಸಹಕಾರ ನೀಡಿದ್ದು, ಸ್ವಚ್ಛ ಭಾರತ ಅಭಿಯಾನ ಹಾಗೂ ಬಯಲು ಶೌಚಾಲಯ ಮುಕ್ತ ಕರ್ನಾಟಕ ಯೋಜನೆಗೆ ಬೆಂಬಲ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರತಿ ಕುಟುಂಬಕ್ಕೆ ರೂ.8,000ದಂತೆ 16,000 ರೂ. ವೆಚ್ಚದಲ್ಲಿ ಈ ಯೋಜನೆ ಸಿದ್ಧಪಡಿಸಲಾಗಿದೆ. ಬಾಕಿ ಮೊತ್ತ ಪಂಚಾಯತ್ ಶೌಚಾಲಯ ನಿರ್ಮಾಣ ಯೋಜನೆಯ ಮೂಲಕ ಪಡೆದುಕೊಂಡಿರುತ್ತಾರೆ. ಅಲ್ಲದೇ ಯಳಜಿತ್ ಹಾಗೂ ತಗ್ಗರ್ಸೆ ಗ್ರಾಮಗಳಲ್ಲಿ 2 ಯೋಜನೆ ಪ್ರಗತಿಯಲ್ಲಿದೆ ಎಂದು ಈ ಸಂದರ್ಭದಲ್ಲಿ ಜೆಸಿಐ ಉಪ್ಪುಂದದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಉಪ್ಪುಂದ ಹೇಳಿದರು.
ಜೇಸಿರೇಟ್ ಅಧ್ಯಕ್ಷೆ ಸೌಮ್ಯ ಜಿ., ಜ್ಯೂನಿಯರ್ ಜೇಸಿ ಅಧ್ಯಕ್ಷ ಸತ್ಯನಾರಾಯಣ ಗಾಣಿಗ, ಕಾರ್ಯದರ್ಶಿ ರಾಮಕೃಷ್ಣ ಖಾರ್ವಿ ಹಾಗೂ ಕೊರಗ ದೇವಾಡಿಗ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.