ಭಾರತ ಮತ್ತು ಜಪಾನ್ ದೇಶಗಳ ನಡುವಿನ ಒಪ್ಪಂದದ ಪ್ರಕಾರ, ಮುಂಬಯಿ ಮತ್ತು ಅಹಮದಾಬಾದ್ ನಡುವೆ ಭಾರತದ ಮೊದಲ ಬುಲೆಟ್ ರೈಲು ಸದ್ಯದಲ್ಲೇ ಆರಂಭವಾಗಲಿದೆ. ಇದಕ್ಕಾಗಿ ಭಾರತಕ್ಕೆ 12 ಬಿಲಿಯನ್ ಡಾಲರ್ ಕಡಿಮೆ ವೆಚ್ಚದ ದೀರ್ಘಾವಧಿ ಸಾಲವನ್ನು ಜಪಾನ್ ನೀಡಲಿದೆ. ಎರಡು ದೇಶಗಳು ಜಪಾನ್ನ ಹೈಸ್ಪೀಡ್ ರೈಲು ತಂತ್ರಜ್ಞಾನ ಹೊಂದಿರುವ ಶಿಂಕಾನ್ಸೆನ್ ರೈಲು ಒಪ್ಪಂದಕ್ಕೆ ಸಹಿ ಹಾಕಿವೆ. ಈ ವ್ಯವಸ್ಥೆ ಭಾರತೀಯ ರೈಲ್ವೆಯಲ್ಲಿ ಕ್ರಾಂತಿ ಆರಂಭಿಸಲಿದೆ.
ಶಿಂಕಾನ್ಸೆನ್ ರೈಲು ಸಂಚಾರವು ಅ.1, 1964ರಲ್ಲಿ ಜಪಾನ್ನಲ್ಲಿ ಆರಂಭಗೊಂಡಿತು. ಟೋಕ್ಯೊ ಮತ್ತು ಒಸಾಕಾ ನಡುವೆ ಆರಂಭಗೊಂಡ ಈ ರೈಲು ಈವರೆಗೆ 5.6 ಬಿಲಿಯನ್ ಪ್ರಯಾಣಿಕರನ್ನು ಕೊಂಡೊಯ್ದಿದೆ. ವಿಶ್ವದ ಅತಿ ಹೆಚ್ಚು ದಟ್ಟಣೆ ಇರುವ ಟೋಕ್ಯೊ- ಒಸಾಕಾ ನಗರಗಳ ನಡುವೆ ಬುಲೆಟ್ ರೈಲು ಆರಂಭದಲ್ಲಿ 4 ತಾಸುಗಳಲ್ಲಿ ಸಂಚರಿಸುತ್ತಿದ್ದು, ಈಗ ಇದು 2.25 ತಾಸುಗಳಲ್ಲೇ ತಲುಪುತ್ತದೆ.
ಸೆಂಟ್ರಲ್ ಜಪಾನ್ ರೈಲ್ವೇ ಕಂಪೆನಿಯ 2014ರ ವರದಿ ಪ್ರಕಾರ ಈ ರೈಲುಗಳು ನೈಸರ್ಗಿಕ ವಿಪತ್ತುಗಳ ಪರಿಸ್ಥಿತಿಯಿಂದ ಉಂಟಾಗುವ ವಿಳಂಬ ಸೇರಿದಂತೆ ಕೇವಲ 54 ಸೆಕೆಂಡ್ಗಳು ಮಾತ್ರ ವಿಳಂಬವಾಗಿ ಆಗಮಿಸಿದೆ. ಈ ಬುಲೆಟ್ ರೈಲು ಪ್ರಯಾಣ ಅತ್ಯಂತ ಸುರಕ್ಷಿತವಾಗಿವೆ. ಕಳೆದ 50 ವರ್ಷಗಳ ಕಾರ್ಯಾಚರಣೆಯಲ್ಲಿ ಜಪಾನ್ನಲ್ಲಿ ಬುಲೆಟ್ ರೈಲುಗಳು ಹಳಿ ತಪ್ಪಿರುವ ಘಟನೆಗಳು ಅಥವಾ ಪ್ರಯಾಣಿಕರ ಸಾವು-ನೋವಿನ ಪ್ರಕರಣಗಳು ಸಂಭವಿಸಿಲ್ಲ.
ಮುಂಬಯಿ- ಅಹಮದಾಬಾದ್ ನಡುವೆ ಸಾಮಾನ್ಯ ಪ್ರಯಾಣದ ಸಮಯ 8 ತಾಸುಗಳಷ್ಟಿದ್ದು, ಬುಲೆಟ್ ರೈಲುಗಳು ಆರಂಭಗೊಂಡಲ್ಲಿ 4 ತಾಸುಗಳಷ್ಟು ಸಮಯ ಉಳಿತಾಯವಾಗಲಿದೆ. ಬುಲೆಟ್ ರೈಲು ಹೆಚ್ಚಿನ ಮಟ್ಟದಲ್ಲಿ ವಾಯು ಮಾಲಿನ್ಯವನ್ನು ತಗ್ಗಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.