ಮುಂಬಯಿ: ಸಾಮಾಜಿಕ ಜಾಲತಾಣಗಳಲ್ಲಿನ ವದಂತಿಗಳನ್ನು ತಳ್ಳಿ ಹಾಕಿರುವ ಆರ್ಬಿಐ, ಗೀಚಿರುವ ನೋಟುಗಳು ಸೇರಿದಂತೆ ಎಲ್ಲಾ ನೋಟುಗಳನ್ನು ಆರ್ಬಿಐ ಸ್ವೀಕರಿಸಲಿದೆ ಎಂದು ಹೇಳಿದೆ.
ಗೀಚು ಮಾರ್ಕ್ ಇರುವ ನೋಟುಗಳನ್ನು ಜ.1ರಿಂದ ಆರ್ಬಿಐ ಸ್ವೀಕರಿಸುವುದಿಲ್ಲ ಎಂದು ವ್ಯಾಟ್ಸ್ಆಪ್ನಲ್ಲಿ ಹರಡಿರುವ ವದಂತಿ ಸತ್ಯಕ್ಕೆ ದೂರವಾದುದು. ಈ ನೋಟುಗಳನ್ನು ಕಾನೂನಾತ್ಮಕವಾಗಿ ಸ್ವೀಕರಿಸಲಾಗುವುದು ಎಂದು ಆರ್ಬಿಐ ಗವರ್ನರ್ ರಘುರಾಮ್ ರಾಜನ್ ತಿಳಿಸಿದ್ದಾರೆ.
ಗೀಚಲಾದ ಇಲ್ಲವೇ ವಿಕಾರಗೊಂಡ ನೋಟುಗಳ ಬದಲು ಹೊಸ ನೋಟುಗಳನ್ನು ಒದಗಿಸುವ ನೀತಿ ಆರ್ಬಿಐ ಈ ಹಿಂದೆಯೇ ಹೊಂದಿತ್ತು. ಇದರರ್ಥ ಈ ನೋಟುಗಳು ಕಾನೂನು ಬಾಹಿರ ಅಥವಾ ಸ್ವೀಕರಿಸಲ್ಪಡದ ನೋಟುಗಳು ಎಂಬುದಲ್ಲ. ಈ ನೋಟುಗಳನ್ನು ಯಾವುದೇ ಸಂದರ್ಭದಲ್ಲೂ ಬಳಸಬಹುದಾಗಿದೆ. ಈ ನೋಟುಗಳನ್ನು ಸ್ವೀಕರಿಸಲು ಯಾವುದೇ ನಿರ್ದಿಷ್ಟ ಅವಧಿ ಇಲ್ಲ ಎಂದು ರಾಜನ್ ಹೇಳಿದ್ದಾರೆ.
ನೋಟುಗಳ ಬಾಳ್ವಿಕೆ ಕ್ಷೀಣಿಸುವುದರಿಂದ ಈ ನೋಟುಗಳ ಮೇಲೆ ಬರೆಯದಂತೆ ಸಾರ್ವಜನಿಕರು ಹಾಗೂ ಬ್ಯಾಂಕುಗಳಲ್ಲಿ ವಿನಂತಿಸಲಾಗುವುದು. ಆದರೆ ಈ ನೋಟುಗಳನ್ನು ಕಾನೂನಾತ್ಮಕವಾಗಿ ಬಳಸಬಹುದಾಗಿದೆ ಎಂದು ಆರ್ಬಿಐ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.