ನವದೆಹಲಿ: ಓರ್ವ ಉತ್ಸಾಹಿ ಸೈಕಲ್ ಸವಾರನಿಗೆ 1450 ಕಿ.ಮೀ. ಸಂಚರಿಸುವುದು ಒಂದು ಮಹತ್ತರವಾದ ಗುರಿ ಎನಿಸಬಹುದು. ಆದರೆ ಹೈದರಾಬಾದ್ನ ಈ ಒಂಟಿ ಕಾಲಿನ ಪ್ಯಾರಾ ಸೈಕ್ಲಿಸ್ಟ್ ಇಂತಹದೊಂದು ಸಾಧನೆ ಮಾಡಲು ಹೊರಟಿದ್ದಾರೆ. ’ಇನ್ಫಿನಿಟಿ ರೈಡ್’ ಹೆಸರಿನಲ್ಲಿ ತಮ್ಮ ಪಯಣ ಆರಂಭಿಸಿರುವ ಆದಿತ್ಯ ಮೆಹ್ತಾ ದೆಹಲಿಯ ಇಂಡಿಯಾ ಗೇಟ್ನಿಂದ ಮುಂಬಯಿ ಕಡೆಗೆ ಸೈಕಲ್ ಸವಾರಿ ನಡೆಸುತ್ತಿದ್ದಾರೆ.
2013ರ ಪ್ಯಾರಾ ಸೈಕ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಎರಡು ಬೆಳ್ಳಿ ಪದಕ ಪಡೆದಿರುವ ಆದಿತ್ಯ, ಈ ಸವಾಲನ್ನು ಕೇವಲ ತನ್ನ ವೈಯಕ್ತಿಕ ಲಾಭಕ್ಕಾಗಿ ಅಲ್ಲ, ತನ್ನಂತೆ ಇರುವ ಭೌತಿಕ ಅಂಗವೈಕಲ್ಯ ಹೊಂದಿರುವವರು ಗೌರವ ಮತ್ತು ಸ್ವಾಭಿಮಾನದಿಂದ ಬದುಕಲು ಅವರಿಗಾಗಿ ಧನಸಹಾಯ ಮಾಡಲು ಈ ಸೈಕಲ್ ಸವಾರಿ ನಡೆಸುತ್ತಿದ್ದಾರೆ.
ಈ ಹಿಂದೆ 2012ರಲ್ಲಿ ಮೂರು ದಿನಗಳ ಕಾಲ ಬೆಂಗಳೂರು-ಹೈದರಾಬಾದ್ ನಡುವೆ 540ಕಿ.ಮೀ. ಸೈಕಲ್ನಲ್ಲಿ ಸಂಚರಿಸುವ ಮೂಲಕ 17 ಲಕ್ಷ ಧನಸಹಾಯ ಪಡೆದಿದ್ದಾರೆ. ಈ ಬಾರಿಯ ದೆಹಲಿ-ಮುಂಬಯಿ ನಡುವಿನ ಪಯಣದ ಸಂದರ್ಭ ದಿನಕ್ಕೆ 250ರಿಂದ 270 ಕಿ.ಮೀ. ಹಾದಿಯನ್ನು ಸಂಚರಿಸುವ ವಿಶ್ವಾಸವನ್ನು ಆದಿತ್ಯ ಹೊಂದಿದ್ದಾರೆ.
ಆದಿತ್ಯ ಮೆಹ್ತಾ 2013ರಲ್ಲಿ ಲಂಡನ್-ಪ್ಯಾರಿಸ್ ನಡುವಿನ 530 ಕಿ.ಮೀ.(9000 ಅಡಿ ಎತ್ತರ), ಕಾಶ್ಮೀರದಿಮದ ಕನ್ಯಾಕುಮಾರಿ ವರೆಗಿನ 3,800 ಕಿ.ಮೀ ಹಾಗೂ ಮನಾಲಿಯಿಂದ ಖಡುಂಗ್ ಲಾ ನಡುವಿನ 18,380 ಅಡಿ ಎತ್ತರವನ್ನು ಏರಿದ್ದಾರೆ.
ಆದಿತ್ಯ ಮೆಹ್ತಾ ಫೌಂಡೇಷನ್ ಆರಂಭಿಸಿ ಅಂಗವೈಕಲ್ಯತೆಯ ಉಪಕರಣಗಳು, ಪ್ರಾಯೋಜಕತ್ವದೊಂದಿಗೆ ಪ್ಯಾರಾ ಅಥ್ಲೀಟ್ಗಳಿಗೆ ಸೈಕ್ಲಿಂಗ್ ಸ್ಪರ್ಧೆಗಳಿಗೆ ಸಹಕರಿಸುವುದು, ಪ್ರೇರಕ ವಿಚಾರಗಳ ಮಾತುಕತೆ ನಡೆಸುವುದು, ಆಹಾರ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸುವುದು ಮೆಹ್ತಾ ಮತ್ತು ಅವರ ತಂಡದ ಗುರಿಯಾಗಿದೆ.
ಆದಿತ್ಯ ಮೆಹ್ತಾ 2006ರಲ್ಲಿ ಬಸ್ ಅಪಘಾತದಲ್ಲಿ ತಮ್ಮ ಬಲ ಕಾಲನ್ನು ಕಳೆದುಕೊಂಡಿದ್ದರು. 2011ರಲ್ಲಿ ಸೈಕ್ಲಿಂಗ್ ಕಾರ್ಯಕ್ರಮವೊಂದರ ಜಾಹೀರಾತು ಮೆಹ್ತಾ ಅವರ ಜೀವನದ ದೃಷ್ಟಿಕೋನವನ್ನೇ ಬದಲಿಸಿತು. ನಿಧಿ ಸಂಗ್ರಹದೊಂದಿಗೆ ಫೌಂಡೇಷನ್ ಪ್ಯಾರಾ ಅಥ್ಲೀಟ್ಗಳಿಗೆ ಉಪಕರಣಗಳ ವಿತರಣೆ, ಕೃತಕ ಕಾಲು ಜೋಡಣೆ, ಪ್ರಯಾಣ ವೆಚ್ಚ ಒದಗಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.