ರಾಜಸ್ಥಾನದ ಸುಮಾರು 40 ವರ್ಷ ವಯಸ್ಸಿನ ಒಂಟಿ ಕಾಲಿನ ಮಹಿಳೆ ತನ್ನ ಜೀವನ ನಡೆಸಲು ಹೂವುಗಳ ಮರಾಟ ಮಾಡುತ್ತಿದ್ದು, ತಾನೋರ್ವ ಪ್ಯಾರಾ ಒಲಿಂಪಿಕ್ ಅಥ್ಲೀಟ್ ಅನ್ನುವ ಸುಳಿವೆ ಇಲ್ಲದಂತಾಗಿದೆ.
ಝಲಾನಾ ಡೂಂಗ್ರಿ ಶಾಂತಿ ಎಂಬ ಪಟ್ಟಣದ ದೀಪಾಲಿ ಸಿಂಗ್ ಶಾಟ್ಪುಟ್ ಹಾಗೂ ಜಾವಲೀನ್ನಲ್ಲಿ ರಾಷ್ಟರ ಮಟ್ಟದಲ್ಲಿ 100ಕ್ಕೂ ಹೆಚ್ಚು ಪದಕಗಳು ಮತ್ತು ಟ್ರೋಫಿಗಳನ್ನು ಪಡೆದಿದ್ದಾರೆ. ಒಂದು ಟಿನ್ ಪೆಟ್ಟಿಗೆಯಲ್ಲಿ ಜೋಡಿಸಲಾಗಿರುವ ಈ ಪ್ರಶಸ್ತಿಗಳು ಈಗ ಧೂಳುಮಯವಾಗಿದೆ. ತನ್ನ ಪತಿ ಚಹಾ ಮಾರುತ್ತಿದ್ದು, ರಾಜಸ್ಥಾನ ರಾಜ್ಯ ಮಟ್ಟದಲ್ಲಿ ಪಡೆದ ಸಣ್ಣ ಮಟ್ಟದ ಪ್ರಶಸ್ತಿ ಹಣದಿಂದ ಆಕೆ ತನ್ನ ಜೀವನ ನಡೆಸುತ್ತಿದ್ದಳು.
’ನನಗೆ ಭಿಕ್ಷಾಟನೆ ಇಷ್ಟವಿಲ್ಲ. ಇತರರಿಗೆ ಕೈಚಾಚಿ ಬೇಡುವುದು ಅನಿಷ್ಟದ ವಿಷಯ. ಆದ್ದರಿಂದ ಹೂವು ಮಾರುವ ಕೆಲಸ ಮಾಡುತ್ತಿದ್ದು, ಇನ್ನೊಂದು ಬಾರಿ ಪ್ರಶಸ್ತಿ ಪಡೆಯುವ ವಿಶ್ವಾಸವಿದೆ’ ಎನ್ನುತ್ತಾರೆ ದೀಪಾಲಿ. ತನ್ನ 11ನೇ ವಯಸ್ಸಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ದೀಪಾಲಿ ತಮ್ಮ ಎಡ ಕಾಲನ್ನು ಕಳೆದುಕೊಂಡಿದ್ದರು.
ಚಹಾ ವಿತರಕ ವಿಶೇಷ ಸಾಮಥ್ಯದ ಶಿವ್ ಪಾಲ್ ಸಿಂಗ್ಗೆ ವಿವಾಹವಾಗಿದ್ದು, ಆತ ಸವಾಯಿ ಮಾನ್ಸಿಂಗ್ ಆಸ್ಪತ್ರೆಯಲ್ಲಿ ಚಹಾ ವಿತರಕರಾಗಿದ್ದಾರೆ. 2003ರಲ್ಲಿ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ವಿಶೇಷ ಸಾಮರ್ಥ್ಯದವರಿಗೆ ನಡೆದ ಕ್ರಾಡಾಕೂಟದಲ್ಲಿ ಶಾಟ್ಪುಟ್ ವಿಭಾಗದಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಕ್ರೀಡಾಲೋಕಕ್ಕೆ ಪದಾರ್ಪಣೆ ಮಾಡಿದ್ದರು.
ಕೃತಕ ಕಾಲು ಹೊಂದಿರುವ ಕ್ರೀಡಾಪಟು ದೀಪಾಲಿ ಪ್ಯಾರಾ ಒಲಿಂಪಿಕ್ನಲ್ಲಿ 12 ವರ್ಷಗಳ ಅವುಭವಿಯಾಗಿದ್ದಾರೆ. ವಿಶೇಷ ಸಾಮರ್ಥ್ಯದ ಕ್ರೀಡಾಪಟುಗಳು ಪ್ರಶಸ್ತಿ ಬಹುಮಾನದ ಸುಮಾರು 5000 ದಿಂದ 10,000 ಪಡೆಯುತ್ತಿದ್ದರೆ ಸಾಮಾನ್ಯ ಕ್ರೀಡಾಳುಗಳು ರಾಜ್ಯ ಸರ್ಕಾರದಿಂದ ಲಕ್ಷಾಂತರ ರೂಪಾಯಿ ಪಡೆಯುತ್ತಿದ್ದಾರೆ. ಅಲ್ಲದೇ ಕಾರ್ಯಕ್ರಮಗಳಲ್ಲಿ ಸನ್ಮಾನಿಸಲಾಗುತ್ತದೆ. ಇದು ಅನ್ಯಾಯವಲ್ಲವೇ ಎಂಬುದು ಅವರ ಪ್ರಶ್ನೆ. ಕೇವಲ 5ನೇ ತರಗತಿ ಉತ್ತೀರ್ಣರಾಗಿರುವ ಇವರು ಸರ್ಕಾರಿ ನೌಕರಿ ಪಡೆಯುದು ಕಷ್ಟವೆನಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.