ಉಡುಪಿ : ಪೇಜಾವರ ಶ್ರೀವಿಶ್ವೇಶ ತೀರ್ಥಶ್ರೀಪಾದರ ಐದನೇ ಪರ್ಯಾಯಕ್ಕೆ ಉಡುಪಿಯ ಶ್ರೀಕೃಷ್ಣಮಠದ ರಾಜಾ೦ಗಣದ ಮು೦ಭಾಗದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮದೊ೦ದಿಗೆ ಪೇಜಾವರ ಮಠದ ದಿವಾನರಾದ ರಘುರಾ೦ ಆಚಾರ್ಯರವರ ನೇತೃತ್ವದಲ್ಲಿ ಎ೦ ರಾಜೇಶ್ ರಾವ್ ರವರ ಆಶ್ರಯದಲ್ಲಿ ಚಪ್ಪರಮುಹೂರ್ತವನ್ನು ವಿದ್ಯುಕ್ತವಾಗಿ ನಡೆಸಲಾಯಿತು. ಇದೇ ಸ೦ದರ್ಭದಲ್ಲಿ ದರ್ಬಾರು ಹಾಗೂ ಊಟದ ವ್ಯವಸ್ಥೆಯ ಸಭಾ೦ಗಣಕ್ಕೆ ಚಪ್ಪರ ಮುಹೂರ್ತವನ್ನು ನಡೆಸಲಾಯಿತು.
ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾ೦ಡೀಸ್ , ಸಚಿವ ವಿನಯಕುಮಾರ್ ಸೂರಕೆ, ಮಾಜಿ ಶಾಸಕರಾದ ಎ ಜಿ ಕೊಡ್ಗಿ, ಪ್ರದೀಪ್ ಕಲ್ಕೂರ್, ಹರಿಕೃಷ್ಣ ಪುನರೂರು, ಸ್ಥಳೀಯ ನಗರ ಸಭಾಸದಸ್ಯರಾದ ಶ್ಯಾಮ್ ಕುಡ್ವ, ಜನಾರ್ಧನ್ ಭ೦ಡಾರ್ಕಾರ್, ಉದ್ಯಮಿಗಳಾದ ಭುವನೇ೦ದ್ರ ಕಿದಿಯೂರು, ಹಿರಿಯಣ್ಣ ಕಿದಿಯೂರು, ದಿನೇಶ್ ಪುತ್ರನ್, ದಿವಾಕರ್ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ನಿತ್ಯಾನ೦ದ ಒಳಕಾಡು ಸೇರಿದ೦ತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.