ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಇಲಾಖೆಗಳಲ್ಲಿ ಯಾವುದೇ ಡೀಸೆಲ್ ವಾಹನಗಳನ್ನು ಖರೀದಿಸದಂತೆ ರಾಷ್ಟ್ರೀಯ ಹಸಿರು ನ್ಯಾಯಪೀಠ(ಎನ್ಜಿಟಿ) ನಿರ್ದೇಶನ ನೀಡಿದೆ. ಆದರೆ ಇದು ಖಾಸಗಿ ಡೀಸೆಲ್ ವಾಹನ ಗ್ರಾಹಕರಿಗೆ ಅನ್ವಯಿಸುವುದಿಲ್ಲ ಎಂದು ಎನ್ಜಿಟಿ ತಿಳಿಸಿದೆ.
ಸಾರಿಗೆ ಇಲಾಖೆಯು 2014ರಲ್ಲಿ 2013ಕ್ಕಿಂತಲೂ 6,748 ಅಧಿಕ ಡೀಸೆಲ್ ವಾಹನಗಳನ್ನು ನೋಂದಾಯಿಸಿದ್ದು, 2015ರ ಮೊದಲ 5 ತಿಂಗಳಲ್ಲಿ 34,261 ವಾಹನಗಳನ್ನು ನೋಂದಾಯಿಸಿದೆ. ಇದು 2014ಕ್ಕಿಂತಲೂ ಶೇ.40ರಷ್ಟು ಅಧಿಕವಾಗಿದೆ ಎಂದು ಎನ್ಜಿಟಿ ದೆಹಲಿ ಸರ್ಕಾರಕ್ಕೆ ನೀಡಿದ ವರದಿಯಲ್ಲಿ ತಿಳಿಸಿದೆ.
ದೆಹಲಿ ಸರ್ಕಾರ ಕಾರುಗಳ ಓಡಾಟಕ್ಕೆ ಸಮ-ಬೆಸ ನಿಯಮ ಜ.1ರಿಂದ ಜಾರಿಗೊಳ್ಳಲಿದ್ದು, ಇತ್ತೀಚೆಗೆ ಸುಪ್ರೀಂ ಕೋರ್ಟ್ ದೆಹಲಿಯಲ್ಲಿ ಡೀಸೆಲ್ ಕಾರುಗಳನ್ನು ನಿಷೇಧಿಸುವ ಅರ್ಜಿ ವಿಚಾರಣೆಗೆ ಸಮ್ಮತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.